
ಖಾನಾಪುರ: ತಾಲೂಕಿನಲ್ಲಿರುವ ಲೈಲಾ ಶುಗರ್ಸ ಏಕೈಕ ಸಕ್ಕರೆ ಕಾರ್ಖಾನೆ, ಇದನ್ನು ನಂಬಿ ಕಬ್ಬು ಬೆಳೆಸುತ್ತಿರುವ ಕಬ್ಬು ಬೆಳೆಗಾರರ ಪರಿಸ್ಥಿತಿ ಹೇಳತಿರದು. ಯಾಕೆಂದರೆ ಕಬ್ಬಿನ ಬಾಕಿ ನೀಡದೆ ಇದ್ದುದರಿಂದ ರೈತರ ಜೀವನ ಹೇಳತಿರದು ಎಂದು ಲಿಂಗನಮಠ ಗ್ರಾಮದ ರೈತ ಪಾಂಡುರಂಗ ಮಿಟಗಾರ ಹೇಳಿದರು.
ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಲೈಲಾ ಶುಗರ್ಸ ಖಾನಾಪುರ ಇದರ ಬಾಕಿ ಬಿಲ್ಲು ಕೊಡಿಸುವಂತೆ ತಹಶಿಲ್ದಾರ ರೇಶ್ಮಾ ತಾಳಿಕೋಟಿ ಅವರಿಗೆ ಲಿಂಗನಮಠ ಹಾಗೂ ಸುತ್ತಮುತ್ತಲಿನ ರೈತರೆಲ್ಲರೂ ಸೇರಿಕೊಂಡು ಮನವಿ ನೀಡಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಖಾನಾಪುರದ ಲೈಲಾ ಶುಗರ್ಸ ಕಾರ್ಖಾನೆಗೆ ಕಬ್ಬು ಕಳಿಸಿದ ರೈತರಿಗೆ ಎಫ್.ಆರ್.ಪಿ ಪ್ರಕಾರ ಕಬ್ಬಿನ ಬಿಲ್ಲು ನೀಡುತ್ತಿಲ್ಲ. ವರ್ಷದಲ್ಲಿ ಸುತ್ತಮುತ್ತಲಿನ ಸಕ್ಕರೆ ಕಾರ್ಖಾನೆಗಳು ೨೪೦೦/-ರೂ, ೨೫೦೦/-ರೂ, ೨೭೪೦/-ರೂ ಕಬ್ಬಿಗೆ ಬಿಲ್ಲನ್ನು ನೀಡಿದರೆ, ಖಾನಾಪುರದ ಲೈಲಾ ಶುಗರ್ಸ ದವರು ಕೇವಲ ಡಿಸೆಂಬರ್ ೧೫ರವರೆಗೆ ಮಾತ್ರ ೨೨೦೦/- ಕಬ್ಬಿನ ಬಿಲ್ಲನ್ನು ನೀಡಿದ್ದಾರೆ. ಉಳಿದ ಬಿಲ್ಲನ್ನು ಇಲ್ಲಿಯವರೆಗೆ ನೀಡದೆ ರೈತರ ಜೋತೆ ತಮ್ಮ ಮೊಂಡುತನ ಪ್ರದರ್ಶಿಸಿ, ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ.
ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ಖಾನಾಪುರದ ಲೈಲಾ ಶುಗರ್ಸ ಕಾರ್ಖಾನೆಗೆ ಕಬ್ಬು ಕಳಿಸಿದ ರೈತರಿಗೆ ಎಫ್.ಆರ್.ಪಿ ಪ್ರಕಾರ ಬಿಲ್ಲನ್ನು ಕೊಡಿಸಿರಿ. ಹಾಗೂ ಕಳೆದ ವರ್ಷದ ಹಂಗಾಮಿನಲ್ಲಿ ಲೈಲಾ ಶುಗರ್ಸ ಕಾರ್ಖಾನೆಗೆ ಕಬ್ಬು ಕಳಿಸಿದ ಬಾಕಿ ಬಿಲ್ಲು ೧೬೦/-ರೂ. ಕೊಡಿಸಬೇಕೆಂದು ಮನವಿ ನೀಡಿ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷ ಕೆ.ಬಿ.ಹಿರೇಮಠ, ರೈತರಾದ ಮಹಾಂತೇಶ ಸಂಗೋಳ್ಳಿ, ಪಾಂಡುರಂಗ ಮಿಟಗಾರ, ಬಸವರಾಜ ಮುಗಳಿಹಾಳ, ಶಬ್ಬೀರ ಹಟ್ಟಿಹೊಳಿ, ಬಸವರಾಜ ಮಾಟೋಳ್ಳಿ, ಮಾರುತಿ ಸತ್ತೆನ್ನವರ, ಗ್ರಾಮೀಣ ಸೇವಾ ಸಂಸ್ಥೆ ಅಧ್ಯಕ್ಷರಾದ ಆನಂದ ಮಾಟೋಳ್ಳಿ, ಬಸನಗೌಡ ಪಾಟೀಲ, ರಾಜು ಸಂಗೋಳ್ಳಿ, ಶಿವಾನಂದ ಬಾಗೇವಾಡಿ, ಕುಶ ಮಿಟಗಾರ, ಪ್ರಕಾಶ ಭಜಂತ್ರಿ, ಸಂಜು ಪಾರಿಶ್ವಾಡ ಹಾಗೂ ಇತರರು ಹಾಜರಿದ್ದರು.

Leave a Comment