
ಜೋಯಿಡಾ :- ಜೋಯಿಡಾದ ಕುಣಬಿ ಭವನದಲ್ಲಿ ಇಂದು ಸೋಮವಾರ ಜೋಯಿಡಾ ಗ್ರಾಮ ಪಂಚಾಯತ್ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು, ಸಮಯಕ್ಕೆ ಸರಿಯಾಗಿ ಜನಪ್ರತಿನಿಧಿಗಳು ಬಾರದೆ ಅಂತಿಮವಾಗಿ ಸಭೆ ರದ್ದಾಯಿತು. ಜೋಯಿಡಾ ಗ್ರಾ.ಪಂ.ವ್ಯಾಪ್ತಿಯಲ್ಲಿ ವೃದ್ದರೊಬ್ಬರು ತೀರಿಕೊಂಡ ಕಾರಣ ಕೆಲ ಜನಪ್ರತಿನಿಧಿಗಳು ಸಭೆಗೆ ಹಾಜರಾಗದ ಕಾರಣ ಜೋಯಿಡಾ ಗ್ರಾ.ಪಂದವರು ಸಭೆ ಮುಂದೆ ಹಾಕೋಣ ಎಂದಾಗ ಜನರು ಕೂಗಾಡಿದರು. ನಾವು ನೀವು ಹೇಳಿದಂತೆ ಕೇಳಿ ಸಾಕಾಗಿದೆ,ಇಂದೇ ಗ್ರಾಮ ಸಭೆ ನಡೆಸಿ ಎಂದು ಪಟ್ಟು ಹಿಡಿದ ಘಟನೆ ನಡೆಯಿತು. ಸಭೆಯಲ್ಲಿ ಜೋಯಿಡಾ ಗ್ರಾಮ ಪಂಚಾಯತಿ ಬಳಿ ಒಣಕಸ ವಿಲೇವಾರಿ ಘಟಕ ಆಗಬಾರದು ಅದನ್ನು ಬೇರೆಡೆಗೆ ಸ್ಥಳಾಂತರಿಸಬೇಕು,ಕೂಡಲೇ ಈ ಕೆಲಸ ನಿಲ್ಲಿಸಿ ಎಂದು ಕೆಲ ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಆನಂದ ಬಡಕುಂದ್ರಿ ಈಗಾಗಲೇ ಒಣಕಸ ವಿಲೇವಾರಿ ಘಟಕ ಕಾಮಗಾರಿ ಮುಗಿಯುತ್ತಾ ಬಂದಿದೆ. ಇದರಿಂದ ಜನರಿಗೆ ಯಾವುದೇ ವಾಸನೆ ಬರುವುದಿಲ್ಲ,ದಯವಿಟ್ಟು ಊರಿನ ಜನರು ಸಹಕರಿಸಬೇಕು ಎಂದು ಜನರನ್ನು ಸಮಾಧಾನ ಪಡಿಸಿದರು. ಆದರೂ ಜನರು ಕೂಗಾಡುತ್ತಾ ,ಚಿರಾಡುತ್ತಾ ಸಭೆ ರದ್ದಾದ್ದರಿಂದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.


Leave a Comment