
ನಾಗೋಡಾ ಶಾಲೆಯಲ್ಲಿ ಗಿಡಕ್ಕೆ ನೀರೆರೆದು ನಲಿ ಕಲಿ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಗಣ್ಯ ವಿವಿಧ ನಲಿ ಕಲಿ ಇಂಗ್ಲೀಷ ಕಾರ್ಡಗಳನ್ನು ಬಿಡುಗಡೆ ಗೊಳಿಸುತ್ತಿರುವ ಅತಿಥಿಗಳು.
ಶಾಲೆಯ ಚಟುವಟಿಕೆಗಳೊಂದಿಗೆ ಸಮುದಾಯದ ಸಮನ್ವಯತೆಯನ್ನು ಸಾಧಿಸಿದರೆ ಮಾದರಿ ಎನಿಸುವ ರೀತಿಯಲ್ಲಿ ಶೈಕ್ಷಣಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಪರಮೇಶ್ವರ ಹರಿಕಂತ್ರ ಅಭಿಪ್ರಾಯ ಪಟ್ಟರು.
ಅವರು ಇತ್ತಿಚಿಗೆ ಜೋಯಿಡಾ ಸಮೀಪದ ನಾÀಗೋಡಾ ಶಾಲೆಯಲ್ಲಿ ನಡೆದ ನಲಿ ಕಲಿ ಮೂರನೇ ತರಗತಿಯ ಇಂಗ್ಲೀಷ ಕಾರ್ಡಗಳ ಬಿಡುಗಡೆ ಹಾಗೂ ದಾನಿಗಳ ದೇಣಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿವರ್ಷವೂ ನಾಗೋಡಾ ಶಾಲೆಯಲ್ಲಿ ವಿವಿಧ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯದ ಸಹಕಾರದೊಂದಿಗೆ ಯಶಸ್ವಿಯಾಗಿ ಮುನ್ನಡೆ ಯುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗೋಡಾ ಈ ದಿಸೆಯಲ್ಲಿ ನಮ್ಮ ಜೋಯಿಡಾ ತಾಲೂಕಿಗೇ ಮಾದರಿಯಗಿದೆ. ದೇಣಗೆ ಸ್ವೀಕರಿಸುವ ಕೈಗಳ ಮೇಲೆ ವಿಶ್ವಾಸ ಹೆಚ್ಚಿರುವುದರಿಂದ ಹಾಗೂ ದೇಣಿಗೆ ಸದ್ಭಳಕೆಯ ಬರವಸೆಯಿಂದ ನಾಗೋಡಾ ಶಾಲೆಗೆ ದಾನ ನೀಡುವವರ ಸಂಖ್ಯೆ ಸಹ ಹೆಚ್ಚಿದೆ ಎಂದು ಶಾಲೆಯ ಕಾರ್ಯನಿರ್ವಹಣೆ ಹಾಗೂ ಭೌತಿಕ ಅಭಿವೃದ್ದಿಯ ಕುರಿತು ಹರಿಕಂತ್ರ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಗಣೇಶ ಕೋಡಿಯಾ, ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಇಂಗ್ಲೀಷ್ ನಲಿಕಲಿ ಕಾರ್ಡನ್ನು ಮಕ್ಕಳಿಗೆ ಪರಿಚಯಿಸಿ ಕಲಿಕೆಯಲಿ ಅಳವಡಿಸಿದ ಕೀರ್ತಿ ನಮ್ಮ ತಾಲೂಕಿಗೆ ಸಲ್ಲುತ್ತಿದೆ. ನಲಿಕಲಿ ಕಾರ್ಡನ್ನು ಯಶಸ್ವಿಯಾಗಿ ಮೂರು ತರಗತಿಗಳಿಗೆ ಅಳವಡಿಸಿದ್ದು ನಾಗೋಡಾ ಶಾಲೆ ಎಂಬ ಹೆಮ್ಮೆ ನಮಗಿದೆ ಎಂದರು. ಮೊದಲ ವರ್ಷದಲ್ಲಿ ತಾಲೂಕಿನ ಒಂದನೆ ಮತ್ತು ಎರಡೆ ತರಗತಗೆ ಈ ಕಾರ್ಡನ್ನು ತಯಾರಿಸಿ ಅನ್ವಯಿಸಲಾಗಿತು. ಈ ವರ್ಷ ಮೂರನೆ ತರಗತಿಗೆ ಇಂಗ್ಲೀಷ್ ಕಾರ್ಡನ್ನು ನಮ್ಮ ಶಾಲೆಯಲ್ಲಿ ಸಿದ್ಪಪಡಿಸಲಾಗಿದ್ದು, ಇದಕ್ಕೆ ಸಹಕರಿಸಿದ ಶಿಕ್ಷಕ ಮಿತ್ರರಾದ ರಾಮನಗರ ಸಿ.ಆರ್.ಪಿ. ಗಳೂ ಆದ ವಿನಾಯಕ ಹೆಗಡೆ ಸಿದ್ದಾಪುರ ಇವರನ್ನು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಮ್.ಸಿ. ಅಧ್ಯಕ್ಷೆ ದೀಪಾ ಗಾವಸ, ಮುಖಕ್ಯ ಶಿಕ್ಷಕ ಗಣಣೇಶ ಕೋಡಿಯಾ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸ್ಪೋಕನ್ ಇಂಗ್ಲೀಷ್ ತರಬೇತಿಗಳ ಮೂಲಕ ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣೀಕರ್ತರಾಗಿದ್ದಾರೆ. ಶಾಲೆಯ ಅಭಿವೃದ್ದಿಗೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಿರತ ಶ್ರಮಿಸುತ್ತಿರುವ ಗಣೇಶ ಕೋಡಿಯಾರವರ ಸಾಧನೆ ಸ್ಲಾಘನಿಯ. ಇವರಿಗೆ ನಮ್ಮ ಶಾಲಾಭಿವೃದ್ದಿ ಸೀತಿ ಯಾವತ್ತೂ ಚಿರಋಣಿಯಾಗಿದ್ದೇವೆ ಎಂದರು.
ಇದೆ ಸಂದರ್ಭದಲ್ಲಿ ದಾನಿಗಳಾದ ಶಿವಾನಂದ ಹನುಮಣ್ಣವರ ರೂ.5000, ಶಾಲೆಯ ಅತಿಥಿ ಶಿಕ್ಷಕಿಯಾದ ಶ್ರೀಮತಿ ದೀಪಾ ಕೋಡಿಯಾ ರೂ.10,000 ಹಾಗೂ ಶ್ರೀಮತಿ ಸಯೀದಾ ಗುತ್ತಲ ರೂ.2000 ಶಾಲೆಯ ಶೈಕ್ಕಷಣಿಕ ಅಭಿವೃದ್ದಿಗೆ ದಾನವಾಗಿ ನೀಡಿದರು. ಶಾಲೆಯ ವಿದ್ಯಾರ್ಥಿಗಳು ಇಂಗ್ಲೀಷನಲ್ಲೇ ಕಾರ್ಯಕ್ರಮ ನಿರ್ವಹಣೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಇದೆ ಸಂದರ್ಭದಲ್ಲಿ ಶಾಲೆಯ ಇಂಚರ ಇಕೋ ಕ್ಲಬ್ ವತಿಯಿಂದ ನಡೆದ ಸ್ಫರ್ದೇಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಭಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷ ಘನಶ್ಯಾಮ ಮಿರಾಶಿ, ಹಳೆ ವಿದ್ಯಾರ್ಥಿ ಸಂಘದ ಈಶ್ವರ ಗಾವಸ, ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಯಶವಂತ ನಾಯ್ಕ, ನಾಗೋಡಾ ಗ್ರಾ.ಪಂ.ಅಧಿಕಾರಿ ಡಿ.ಎನ್. ಭಟ್ಟ, ಶಿಕ್ಷಕರ ಸಂಘದ ಜೋಯಿಡಾ ತಾಲೂಕಾ ಅಧ್ಯಕ್ಷ ಮಾದೇವ ಹಣದನಕರ್, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಧಾ ದೇಸಾಯಿ, ಹಾಗೂ ನಾಗೋಡಾ ಶಾಲೆಯ ಶಿಕ್ಷಕಿಯರು, ಎಸ್.ಡಿ.ಎಮ್.ಸಿ. ಸದಸ್ಯರು ಉಪಸ್ಥಿತರಿದ್ದರು.

Leave a Comment