
ಪ್ರೇಯಸಿಯೆ ನಿನ್ನ ಕಾಣಲು,ಪ್ರೀತಿಯ ಬಲೆಯಲ್ಲಿ ಬಿದ್ದವನು.ಜೊತೆ ಜೊತೆಯಲ್ಲಿ ಸಾಗಲು,ನಿನ್ನಯ ಹೃದಯ ಗೆದ್ದವನು.
ಹಿಂತಿರುಗಿ ನೀ ನೋಡಿ ನಾಚಿದಾಗ,ಕಣ್ಣತುಂಬಾ ಸಂತೋಷ ವಾಗುವುದು.ಪ್ರೇಮಗೀತೆಯನ್ನು ಹಾಡಿದಾಗ,ಕೋಗಿಲೆ ಕೂಡಾ ನಾಚುವುದು.
ದಿನರಾತ್ರಿ ನೆನಪಗೆ ಪ್ರೀತಿ ಪ್ರೇಮದ,ಮನಸ್ಸಿನ ಪುಟಗಳ ಪಾಠವು.ದಿನಪೂರ್ತಿ ಒಮ್ಮೆ ಕಾಣದ,ನಿನ್ನ ನೋಡುವ ಹುಚ್ಚು ಹಠವು.
ಈ ಸುಂದರ ಪ್ರೀತಿಯು ಒಂದಾಗಿಸಿ,ಪ್ರೀಯತಮನೆಂದು ನನ್ನೆ ಗುರುತಿಸಿದೆ.ಈ ಹೃದಯದ ಬಾಗಿಲಿಗೆ ಬೆಳಕಾಗಿಸಿ,ಪ್ರೇಮ ದೇವತೆಯಾಗಿ ನನ್ನೆ ಪ್ರೀತಿಸಿದೆ.


Leave a Comment