
ಹಳಿಯಾಳ:- ಕೇಂದ್ರ ಸರ್ಕಾರದ ಗ್ರಾಮೀಣ ಅಭೀವೃದ್ದಿ ಮಂತ್ರಾಲಯದ ಉತ್ತರ ಕನ್ನಡ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಮೇಲುತ್ಸುವಾರಿ (ದಿಶಾ) ಸಮಿತಿಗೆ ಹಳಿಯಾಳ ತಾಲೂಕಿನ ದಲಿತಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ಯಲ್ಲಪ್ಪಾ ಹೊನ್ನೊಜಿ ನಾಮನಿರ್ದೇಶಿತಗೊಂಡಿದ್ದಾರೆ.
ಸುಮಾರು 15 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಯಲ್ಲಪ್ಪಾ ಮೊದಲ ಬಾರಿಗೆ ಚಲವಾದಿ ಮಹಾಸಭಾದ ತಾಲೂಕಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಬಳಿಕ ದಲಿತ ಸಂಘರ್ಷ ಸಮೀತಿ ಜಿಲ್ಲಾ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಾ ಬಡವರ, ನೊಂದವರ ಪರವಾಗಿ ಧ್ವನಿ ಎತ್ತಿ ಹೊರಾಟದ ಹಾದಿಯಲ್ಲಿ ಬಂದಿರುವ ಯಲ್ಲಪ್ಪಾ ಹೊನ್ನೊಜಿ ಅವರು ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಸದ್ಯ ಹಳಿಯಾಳ ತಾಲೂಕಿನ ದಲಿತಪರ ಸಂಘಟನೆ ಒಕ್ಕೂಟದ ತಾಲೂಕಾ ಅಧ್ಯಕ್ಷ ರಾಗಿರುವ ಅವರು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಆಪ್ತ ವಲಯದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಅವರ ಸಮಾಜ ಸೇವೆಯನ್ನು ಗುರುತಿಸಿ ಸಂಸದ ಅನಂತಕುಮಾರ ಹೆಗಡೆ ಅವರ ನಿರ್ದೇಶನದ ಮೆರೆಗೆ ಉತ್ತರ ಕನ್ನಡ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಮೇಲುತ್ಸುವಾರಿ (ದಿಶಾ) ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಯಲ್ಲಪ್ಪಾ ಅವರು ತನ್ನನ್ನು ದಿಶಾ ಸಮೀತಿಗೆ ನಾಮನಿರ್ದೇಶನ ಮಾಡಿದ ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಸಹಕರಿಸಿದ ಬಿಜೆಪಿ ಜಿಲ್ಲಾಧ್ಯಕ್ಷರು, ಹಳಿಯಾಳದ ಬಿಜೆಪಿಯ ಎಲ್ಲ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.

Leave a Comment