
ಹಳಿಯಾಳ : ಹಳಿಯಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬಿಸಿಎ)-ಅ ಗೆ ಮೀಸಲಾಗಿದ್ದರೇ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.
23 ಸದಸ್ಯ ಬಲದ ಹಳಿಯಾಳ ಪುರಸಭೆಯ ಆಡಳಿತ ಮಂಡಳಿಗೆ ಕಳೆದ ಒಂದೂವರೆ ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೇಸ್ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದ್ದರೇ ಬಿಜೆಪಿ-7 ಸ್ಥಾನ, ಜೆಡಿಎಸ್-1 ಹಾಗೂ ಪಕ್ಷೇತರ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.
ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೇಸ್ಸ ಹಳಿಯಾಳ ಪುರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು ಕಾಂಗ್ರೇಸ್ನಲ್ಲಿ ಬಿಸಿಎ- ಮೀಸಲಾತಿಯಲ್ಲಿ ಬರುವವರು ವಾರ್ಡ ನಂ-3 ನವೀನ ಕಾಟಕರ, ವಾರ್ಡ-6- ಅಜರುದ್ದೀನ್ ಬಸರಿಕಟ್ಟಿ, ವಾರ್ಡ-8-ಮುಸರತಜಹಾ ಬಸಾಪುರ,ವಾರ್ಡನಂ-11 ದ್ರೌಪದಿ ಅಗಸರ, ವಾರ್ಡ-20 ಫಯಾಜ ಶೇಖ್, ವಾರ್ಡ-23-ಶಮಿಮಬಾನು ಜಂಬುವಾಲೆ.
ಆಗಿದ್ದರೇ ಬಿಜೆಪಿಯಲ್ಲಿ ವಾರ್ಡನಂ1 ರ ಚಂದ್ರಕಾಂತ ಕಮ್ಮಾರ ಹಾಗೂ ವಾರ್ಡ ನಂ-18ರ ರೂಪಾ ಗಿರಿ ಮತ್ತು ಜೆಡಿಎಸ್ನ ಏಕೈಕ ಸದಸ್ಯೆ ವಾರ್ಡನಂ-12ರ ಶಬಾನಾ ಅಂಕೋಲೆಕರ ಅವರುಗಳು ಅಧ್ಯಕ್ಷ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಪೈಪೊಟಿ ನಡೆಸಬಹುದಾಗಿದೆ.
ಇನ್ನೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದ್ದು ಇಲ್ಲಿ ಆಕಾಂಕ್ಷಿಗಳ ಸಂಖ್ಯೆಯು ಹೆಚ್ಚಿದ್ದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಅಧ್ಯಕ್ಷ ಸ್ಥಾನ ದೊರೆಯದೆ ಇದ್ದು ಅವರನ್ನು ಕೂಡ ಉಪಾಧ್ಯಕ್ಷ ಸ್ಥಾನದಲ್ಲಿ ಕೂರಿಸುವ ನಿರ್ಧಾರವನ್ನು ಆಡಳಿತದ ಚುಕ್ಕಾಣಿ ಹಿಡಿಯುವವರು ಮಾಡಬಹುದಾಗಿದೆ.
ಚುನಾವಣೆಯಲ್ಲಿ ಗೆದ್ದು ಪುರಸಭೆಯಲ್ಲಿ ಕೂರಲು ಆಗದೆ ಇದ್ದು ಇಲ್ಲಂದಂತಾಗಿದ್ದ ತೀರಾ ನಿರಾಶಾಭಾವನೆಯಲ್ಲಿ ಒಂದೂವರೆ ವರ್ಷ ಕಳೆದಿದ್ದ ಸರ್ವ ಸದಸ್ಯರಲ್ಲಿ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಸಾಕಷ್ಟು ಚಟುವಟಿಕೆಗಳು ಗರಿಗೆದರಿದ್ದು ಪುರಸಭೆಯ ಅಧ್ಯಕ್ಷ ಗಾದಿ ಹಿಡಿಯಲು ಲಾಬಿಗಳು ಈಗಾಗಲೇ ಶುರುವಾಗಿವೆ.

Leave a Comment