
ಜೋಯಿಡಾ-
ಜೋಯಿಡಾ ತಾಲೂಕಿನ ಕೋಳಿ ಪಾರ್ಮಗಳಲ್ಲಿ ಕರೋನಾ ರೋಗ ದ ಭೀತಿ ಇಲ್ಲ ಎಂದು ಜೋಯಿಡಾ ಪಶು ಇಲಾಕೆ ತಾಲೂಕಾ ವೈಧ್ಯಾಧಿಕಾರಿ ರವೀಂದ್ರ ಹುಜರತ್ತಿ ತಿಳಿಸಿದ್ದಾರೆ.
ಅವರು ಬುಧವಾರ ದಂದು ಜೋಯಿಡಾ ಗ್ರಾ.ಪಂ.ವ್ಯಾಪ್ತಿಯ ಹುಡಸಾ ಬಳಿಯ ಕೋಳಿ ಪಾರ್ಮಗೆ ಬೇಟಿ ನೀಡಿ ಕರೋನಾ ವೈರಸ್ ಬಗ್ಗೆ ಪರೀಕ್ಷೆ ನಡೆಸಿ ಯಾವುದೇ ತೊಂದರೆ ಇಲ್ಲ ಎಂಬ ಮಾಹಿತಿ ನೀಡಿದರು. ಅಲ್ಲದೇ ಇತ್ತಿಚಿನ ದಿನಗಳಲ್ಲಿ ಕೋಳಿಯಿಂದಲೇ ಕರೋನಾ ವೈರಸ್ ಹರಡುತ್ತಿದೆ ಎಂಬುದು ತಪ್ಪು ಮಾಹಿತಿ . ಜೋಯಿಡಾ ತಾಲೂಕಿನ ಯಾವುದೇ ಕೋಳಿ ಪಾರ್ಮಗಳಲ್ಲಿ ಕರೋನಾ ಬಗ್ಗೆ ಭಯ ಬೇಡ .ಚಿಕನ್ ಪ್ರೀಯರು ಭಯ ಪಡದೆ ಚಿಕನ್ ತಿನ್ನಬಹುದು .ಕೋಳಿಗಳಿಂದ ವೈರಸ್ ಹರಡುತ್ತಿಲ್ಲ ಎಂದರು.


Leave a Comment