
#ಕಾರವಾರ: #ಭಾರತೀಯ ನೇವಿ #ಮುಖ್ಯಸ್ಥ #ಆಡ್ಮಿರಲ್ ಕರಮ್‌ಬೀರ್ ಸಿಂಗ್ ಕಾರವಾರ ಬಳಿಯ #ಐಎನ್ಎಸ್ ಕದಂಬ #ನೌಕಾನೆಲೆಗೆ ಭೇಟಿ ನೀಡಿದರು.
ಅವರನ್ನು ಕಾರವಾರ ಐಎನ್ ಎಸ್ ಕದಂಬ ಮುಖ್ಯಸ್ಥ , ರಿಯರ್ ಆಡ್ಮಿರಲ್ #ಮಹೇಶ್ ಸಿಂಗ್ ಸ್ವಾಗತಿಸಿದರು.ಹಾಗೂ ಸೀಬರ್ಡ ಎರಡನೇ ಹಂತದ ವಿವಿಧ ಕಾಮಗಾರಿಗಳನ್ನು ತೋರಿಸಿದರು. ಸುರಕ್ಷತಾ ಕ್ರಮಗಳ ಬಗ್ಗೆ ಸಹ ವಿವರಿಸಲಾಯಿತು.
ಸೀಬರ್ಡ ಡಿಜಿ, ವೈಸ್ ಆಡ್ಮಿರಲ್ ಶ್ರೀಕಾಂತ ನೇವಿ ಕಾರವಾರದ ವಿವಿಧ ಅಭಿವೃದ್ಧಿ ಹಂತಗಳನ್ನು ವಿವರಿಸಿದರು. ಹಿರಿಯ ಅಧಿಕಾರಿಗಳೊಂದಿಗೆ ನೇವಿ ಮುಖ್ಯಸ್ಥ ಕರಮ್‌ಬೀರ್ ಸಿಂಗ್ ಸಭೆ ನಡೆಸದರು.
ನೇವಿಯ ಅತ್ಯಂತ ಸೂಕ್ಷ್ಮ ಕಾರ್ಯಾಚರಣೆ ಮತ್ತು ಮುಂದಿನ ಉದ್ದೇಶಗಳ ಗುರಿ ಸಾಧನೆಗೆ ಬೇಕಾದ ಸಿದ್ಧತೆಗಳನ್ನು ಸಹ ನೇವಿಯ ಹಿರಿಯ ಅಧಿಕಾರಿಗಳ ಜೊತೆ ನೇವಿ ಛೀಫ್ ಕರಮ್‌ಬೀರ್ ಸಿಂಗ್ ಚರ್ಚಿಸಿದರು ಎಂದು ಕಾರವಾರ ನೌಕಾನೆಲೆ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಯ್ ಕಪೂರ್ ತಿಳಿಸಿದ್ದಾರೆ.
Leave a Comment