ಜೋಯಿಡಾ –
ಮಹಾಮಾರಿ ಕರೋನಾ ವೈರಸ್ ದೇಶದೆಲ್ಲೆಡೆ ಹಬ್ಬುತ್ತಿರುವ ಕುರಿತು ಜೋಯಿಡಾ ತಹಶೀಲ್ದಾರ ಆದೇಶದ ಮೇರೆಗೆ ಜೋಯಿಡಾ ತಾಲೂಕಿನ ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ಉಳವಿ ಸರ್ಕಾರದ ಮುಂದಿನ ಆದೇಶ ಬರುವ ವರೆಗೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಉಳವಿ ಟ್ರಸ್ಟ್ ಕಮಿಟಿ ತಿಳಿಸಿದೆ.
ಕರೋನಾ ವೈರಸ್ ಬರದಂತೆ ತಡೆಗಟ್ಟಲು ಈ ಕ್ರಮ ಕೈಗೊಂಡಿದ್ದು ,ಶ್ರೀ ಕ್ಷೇತ್ರ ಉಳವಿ ಉತ್ತರ ಕರ್ನಾಟಕ ಜನರ ಪ್ರಸಿದ್ದ ದೇವಾಲಯವಾಗಿದ್ದು ದಿನವೂ ಸಾವಿರಾರು ಭಕ್ತರು ಇಲ್ಲಿ ದೇವರ ದರ್ಶನಕ್ಕೆ ಬರುತ್ತಾರೆ. ಆದ್ದರಿಂದ ಕೆಲ ದಿನಗಳ ಕಾಲ ಭಕ್ತರಿಗೆ ಪ್ರವೇಶ ನಿಷೇದಿಸಲಾಗಿದೆ.
ಸದ್ಯದಲ್ಲೇ ಯುಗಾದಿ ಹಬ್ಬವಿದ್ದು ಸಾವಿರಾರು ಭಕ್ತರು ಸ್ವಾಮಿಗಳ ದರ್ಶನಕ್ಕೆ ಆಗಮಿಸುತ್ತಿದ್ದು ಮಹಾಮಾರಿ ಕರೋನಾ ವೈರಸ್ ಬಂದ ಕಾರಣ ದೇವಸ್ಥಾಕ್ಕೆ ಭಕ್ತರಿಗೆ ಪ್ರವೇಶವಿರುವುದಿಲ್ಲ ಎಂದು ಉಳವಿ ಟ್ರಸ್ಟ್ ಕಮಿಟಿ ಈ ಮೂಲಕ ಭಕ್ತರಲ್ಲಿ ವಿನಂಸಿಕೊಂಡಿದೆ.
Leave a Comment