
ಹಳಿಯಾಳ:- ಇಲ್ಲಿಯ ಶಿವಾಜಿ ವೃತ್ತದಲ್ಲಿ ಇಂದು ಜಯ ಕರ್ನಾಟಕ ಸಂಘಟನೆಯಿಂದ ಕೊರೊನಾ ವೈರಸ್ ಕುರಿತು ಜನಜಾಗೃತಿ ಮೂಡಿಸಲಾಯಿತು.
ಜನರಿಗೆ ಹರಡದಂತೆ ಹೇಗೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಪ್ರಾತ್ಯಕ್ಷಿಕೆಗಳ ಮೂಲಕ ಅರಿವು ಮೂಡಿಸಲಾಯಿತು. ಅಲ್ಲದೇ ಹ್ಯಾಂಡ ಕರ್ಚಿಫ(ಕೈ ವಸ್ತ್ರ)ಗಳ ಮೂಲಕ ಮಾಸ್ಕಗಳನ್ನು ತಯಾರಿಸಿ ಜನರಿಗೆ ವಿತರಿಸಿ ಎಲ್ಲರೂ ಮಾಸ್ಕ ಧರಿಸುವಂತೆ, ಸ್ಯಾನಿಟೈಸರ್ ಬಳಸುವಂತೆ ಹಾಗೂ ಸ್ವಚ್ಚತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು.
ಪ್ರಧಾನ ಮಂತ್ರಿಯವರು ರವಿವಾರ ಕರೆ ನೀಡಿರುವ ಜನತಾ ಕಫ್ರ್ಯೂಗೆ ಎಲ್ಲರೂ ಬೆಂಬಲ ಸೂಚಿಸುವ ಮೂಲಕ ಕೊರೊನಾ ವೈರಸ್ ಹರಡದಂತೆ ಎಲ್ಲರೂ ಸಹಕರಿಸುವಂತೆ ಜಯ ಕರ್ನಾಟಕ ಸಂಘಟನೆಯ ಘಟ್ಟದ ಮೇಲಿನ ಅಧ್ಯಕ್ಷ ವಿಲಾಸ ಕಣಗಲಿ ಕೊರಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾಧ್ಯಕ್ಷ ಶಿರಾಜ ಮುನವಳ್ಳಿ, ಪ್ರಮುಖರಾದ ಅನಿಸ ಪಿರವಾಲೆ, ಕಿರಣ ಕಮ್ಮಾರ, ಗಣೇಶ, ಮಾದೇವ, ಮಲ್ಲೇಶಿ, ದುರ್ಗಪ್ಪಾ, ಚಾಂದಸಾಬ್,ವಿನೋದ ಗಿಂಡೆ, ನವೀನ, ಆಕಾಶ, ಮಾರುತಿ ಇತರರು ಇದ್ದರು.
Leave a Comment