
ಹಳಿಯಾಳ:- ಸ್ಯಾನಿಟೈಸರ್ ಬಾಟಲ್ ಮೇಲಿನ ಎಮ್ಆರ್ಪಿ ದರವನ್ನು ಅಳುಕಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಹಳಿಯಾಳದ ಮಾರುಕಟ್ಟೆ ಪ್ರದೇಶದಲ್ಲಿರುವ ರಾಜೇಂದ್ರ ಮೆಡಿಕಲ್ಸ್ ಮೇಲೆ ದಾಳಿ ನಡೆಸಿದ ಕಾರವಾರದ ಸಹಾಯಕ ನಿಯಂತ್ರಕರು ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಖಾರಿಗಳು ಪ್ರಕರಣ ದಾಖಲಿಸಿಕೊಂಡು ವ್ಯಾಪಾರಸ್ಥನಿಗೆ 5ಸಾವಿರ ರೂ ದಂಡ ವಿಧಿಸಿರುವ ಘಟನೆ ಹಳಿಯಾಳದಲ್ಲಿ ಶನಿವಾರ ನಡೆದಿದೆ.
ಕೊರೊನಾ ವೈರಸ್ ಭಿತಿಯಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕಗಳನ್ನು ಹೆಚ್ಚಾಗಿ ಜನರು ಖರಿದಿಸುತ್ತಿದ್ದಾರೆ. ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲವು ಔಷಧಿಕ ವ್ಯಾಪಾರಿಗಳು, ಇತರ ವ್ಯಾಪಾರಿಗಳು ಸಹ ಈ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕೇಳಿ ಬರುತ್ತಿದೆ. ಶನಿವಾರ ಇಲ್ಲಿಯ ಆರ್ವೈಯಿ ಕೌಶಲ್ಯ ಅಭಿವೃದ್ದಿ ಕೇಂದ್ರದ ಸಿಬ್ಬಂದಿ ಮಾರುಕಟ್ಟೆ ಪ್ರದೇಶದಲ್ಲಿರುವ ರಾಜೇಂದ್ರ ಮೆಡಿಕಲ್ಸ್ ಗೆ ತೆರಳಿ ಸ್ಯಾನಿಟೈಸರ್ ಖರಿದಿಸಿದ್ದಾರೆ. ಅದರ ಬೆಲೆ ಕೇಳಿದಾಗ ಅನುಮಾನಗೊಂಡ ಅವರು ಎಮ್ಆರ್ಪಿ ದರ ನೋಡಿದರೇ ಅದಕ್ಕೆ ಬಿಳಿ ಬಣ್ಣ ಹಚ್ಚಿ ಕಂಪೆನಿ ದರವನ್ನು ಅಳುಕಿಸಿದ್ದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಿದೆ.
ಈ ಬಗ್ಗೆ ಅಂಗಡಿಯವರನ್ನು ವಿಚಾರಿಸಿದಾಗ ಬೇಕಾದರೆ ತಗೊಳ್ಳಿ ಇಲ್ಲವೇ ಬಿಡಿ ಎನ್ನುವ ಉತ್ತರ ಬಂದಿದೆ. ಈ ವಿಷಯವನ್ನು ತಿಳಿದ ಕೌಶಲ್ಯ ಅಭಿವೃದ್ದಿ ಕೇಂದ್ರದ ನಿರ್ದೇಶಕ ನಾರಾಯಣ ಟೋಸುರ ಅವರು ಹಳಿಯಾಳ ಪುರಸಭೆ ಅಧಿಕಾರಿಗಳಿಗೆ, ಕಾರವಾರದ ಸಹಾಯಕ ನಿಯಂತ್ರಕರು ಕಾನೂನು ಮಾಪನಶಾಸ್ತ್ರ ಇಲಾಖೆಗೆ ದೂರು ನೀಡಿದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಇಲಾಖೆ ಅಧಿಕಾರಿಗಳು ಹಳಿಯಾಳಕ್ಕೆ ಆಗಮಿಸಿ ಚೌಷಧಿ ಅಂಗಡಿ ತಪಾಸಣೆ ನಡೆಸಿದ್ದು ಈ ವೇಳೆ ಸ್ಯಾನಿಟೈಸರ್ ಮೇಲಿನ ಎಮ್ಆರ್ಪಿ ದರ ಅಳುಕಿಸಿದ್ದು ಕಂಡು ಬಂದಿದ್ದು ಈ ಬಗ್ಗೆ ರಾಜೇಂದ್ರ ಮೆಡಿಕಲ್ ವಿರುದ್ದ ಪ್ರಕರಣ ದಾಖಲಿಸಿಕೊಂಡು 5 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.
ದಾಳಿಯಲ್ಲಿ ಕಾರವಾರದ ಸಹಾಯಕ ನಿಯಂತ್ರಕರು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ ಕೆಜಿ ಕುಲಕರ್ಣಿ, ಅಸಿಸ್ಟ್ಂಟ್ ಡ್ರಗ್ ಕಂಟ್ರೋಲರ್ ಕಾರವಾರದ ರೆಣುಕಾಸ್ವಾಮಿ ಇದ್ದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿ ಕುಲಕರ್ಣಿ ಅವರು ಎಮ್ಆರ್ಪಿ ದರ ಬಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಬಗ್ಗೆ ಹಾಗೂ ಎಮ್ಆರ್ಪಿ ದರಗಳನ್ನು ಅಳುಕಿಸಿ ಗ್ರಾಹಕರಿಗೆ ಮೊಸ ಮಾಡುವ ಬಗ್ಗೆ ಖಚಿತ ದೂರು ನೀಡಿದರೇ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Comment