ಹಳಿಯಾಳ:- ಸಾರ್ವಜನೀಕರು ತೀರಾ ಅಗತ್ಯ ಬಿದ್ದರೇ ಮಾತ್ರ ಮನೆಯಿಂದ ಹೊರಗೆ ಬರಬೇಕು. ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುವಂತೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಸೂಚಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು ವಿದೇಶದಿಂದ ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಹಳಿಯಾಳದ ಕಂಟ್ರೋಲ್ ರೂಂಗಳಾದ ಆರೋಗ್ಯ ಇಲಾಖೆ-08284-220165, ತಹಶೀಲ್ದಾರ್ ಕಚೇರಿ-08284-220134 ಹಾಗೂ ಪೋಲಿಸ್ ಇಲಾಖೆ-220133 ಗೆ ದೂರವಾಣಿ ಕರೆ ಮೂಲಕ ತಿಳಿಸುವಂತೆ ಮನವಿ ಮಾಡಿದರು.
ಹಳಿಯಾಳದ ಮಾವಿನಕೊಪ್ಪ, ಅರ್ಲವಾಡ, ಕಾವಲವಾಡ ಚೆಕ್ ಪೊಸ್ಟ್ಗಳಲ್ಲಿ ಅತೀ ತುರ್ತು ಕೆಲಸಗಳನ್ನು ಹೊರತುಪಡಿಸಿ ಹಳಿಯಾಳದಿಂದ ಹೊರಗೆ ಹೋಗಲು ಹಾಗೂ ಒಳಗೆ ಬರುವುದನ್ನು ಸಂಪೂರ್ಣವಾಗಿ ನಿರ್ಭಂದಿಸಲಾಗಿದೆ ಎಂದರು.
ಇನ್ನೂ ಹಳಿಯಾಳದಲ್ಲಿ ವಾರದ ಸಂತೆ ರದ್ದಾಗಿದ್ದರಿಂದ ಜನರಿಗೆ ಅಗತ್ಯ ಜೀವನಾವಶ್ಯಕ ವಸ್ತು ಹಾಗೂ ಕಾಯಿಪಲ್ಯೆಗಳನ್ನು ವಿತರಿಸುವ ಬಗ್ಗೆ ಚರ್ಚಿಸಲಾಗುತ್ತಿದ್ದು ಜಿಲ್ಲಾಧಿಕಾರಿಗಳ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮದವರಿಗೆ ತಿಳಿಸಿದರು.
Leave a Comment