ಹಳಿಯಾಳ:- ತಾಲೂಕಿನ ಗಡಿಯ ಚೆಕ್ಪೊಸ್ಟ್ಗಳಲ್ಲಿ ನಾಕಾಬಂದಿ ಮಾಡಿರುವ ಕಾರಣ ಕೆಲವರು ಅಡ್ಡ ರಸ್ತೆಗಳನ್ನು ಹಿಡಿದು ಸಂಚರಿಸುತ್ತಿರುವ ಕಾರಣ ಗ್ರಾಮಾಂತರ ಭಾಗದ ಜನತೆ ತಮ್ಮ ಗ್ರಾಮಗಳಿಗೆ ಯಾರು ಬರದಂತೆ ತಾವೇ ರಸ್ತೆಗಳಿಗೆ, ಮರದ ಕೊಂಬೆಗಳು, ಕಲ್ಲು, ಪೈಪಗಳನ್ನು ಇಟ್ಟು ರಸ್ತೆ ಬಂದ್ ಮಾಡಿದ್ದು ಕಂಡು ಬರುತ್ತಿದೆ.
ಹಳಿಯಾಳದ ಅಳ್ನಾವರ ರಸ್ತೆಯ ಅರ್ಲವಾಡ ಚೆಕ್ಪೊಸ್ಟ್, ಧಾರವಾಡ ರಸ್ತೆಯ ಮಾವಿನಕೊಪ್ಪ ಚೆಕ್ಪೊಸ್ಟ್ ಹಾಗೂ ಕಲಘಟಗಿ ರಸ್ತೆಯ ಕಾವಲವಾಡ ಚೆಕ್ ಪೊಸ್ಟ್ಗಳಲ್ಲಿ ನಾಕಾಬಂದಿ ಮಾಡಲಾಗಿದ್ದು ತುರ್ತು ಸೇವೆ ಹೊರತುಪಡಿಸಿ ಎಲ್ಲ ಸಂಚಾರಕ್ಕೂ ನಿರ್ಭಂದ ಹೇರಲಾಗಿದೆ.
ಇದರಿಂದ ಕೆಲವರು ಚೆಕ್ಪೊಸ್ಟ್ಗಳ ಸನಿಹದ ಕೆಲವು ಅಡ್ಡ ರಸ್ತೆಗಳನ್ನು ಹಿಡಿದು ಗ್ರಾಮಗಳ ಒಳಗಿನಿಂದ ಹಳಿಯಾಳವನ್ನು ಪ್ರವೇಶಿಸುತ್ತಿರುವ ಹಾಗೂ ಹೊರಗಿನಿಂದ ಒಳಗೆ ಬರುತ್ತಿರುವ ವಿದ್ಯಮಾನದಿಂದ ಬೇಸರಗೊಂಡ ಗ್ರಾಮಸ್ಥರು ನೇರವಾಗಿ ತಮ್ಮ ಗ್ರಾಮಗಳ ಮುಖ್ಯ ಧ್ವಾರಗಳಲ್ಲಿ ಕಲ್ಲು, ಮರದ ಕೊಂಬೆಗಳು, ಪೈಪಗಳನ್ನು ಇಟ್ಟು ರಸ್ತೆ ಬಂದ ಮಾಡಿರುವ ವಿದ್ಯಮಾನಗಳು, ದುಸಗಿ, ಮದ್ನಳ್ಳಿ, ಯಡೋಗಾ ಸೇರಿದಂತೆ ಇತರ ಕಡೆಗಳಲ್ಲೂ ನಡೆದಿರುವ ಬಗ್ಗೆ ವರದಿಯಾಗಿವೆ.

Leave a Comment