ಹಳಿಯಾಳ :- #ಶ್ರೀರಾಮನವಮಿಯ ಪವಿತ್ರ ದಿನವಾದ ಗುರುವಾರ ಪಟ್ಟಣದ #ಬಸವನಗರದಲ್ಲಿ ಎರಡು ದೊಡ್ಡ ಗಾತ್ರದ ಸುಮಾರು 5 ಅಡಿಗೂ ಹೆಚ್ಚು ಉದ್ದದ “#ಧಾಮಿನ” ಜಾತಿಯ ಹಾವುಗಳು #ಮಿಲನ ಮಹೋತ್ಸವದಲ್ಲಿ ತೊಡಗಿದ್ದು ಕಂಡು ಬಂದಿತು.
ಕೊರೊನಾ ವೈರಸ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು ಬಿದಿ, ಬಡಾವಣೆ ಇನ್ನಿತರ ಪ್ರದೇಶಗಳು ಜನದಟ್ಟಣೆ, ಜನಸಂಚಾರವಿಲ್ಲದೇ ಬಿಕೊ ಎನ್ನುತ್ತಿವೆ..
ಹೀಗಿರುವಾಗ ಇಂದು ಬಸವನಗರದಲ್ಲಿ ಈ ಎರಡು ಹಾವುಗಳು ಯಾರ ಭಯವಿಲ್ಲದೇ ಬಿಂದಾಸ್ ಆಗಿ ಮಿಲನ ಮಹೋತ್ಸವದಲ್ಲಿ ತೊಡಗಿದ್ದು ಕಂಡು ಬಂದಿತು.
ಜನರು ತಮ್ಮ ಮನೆಯ ಟೆರಸ್ ಗಳ ಮೇಲೆ ನಿಂತು ಹಾವುಗಳ ಮಿಲನೋತ್ಸವವನ್ನು ಕಣ್ತುಂಬಿಕೊಂಡರು.
Leave a Comment