
ಜೋಯಿಡಾ –
ದಾಂಡೇಲಿ ಅರಣ್ಯ ವ್ಯಾಪ್ತಿಗೆ ಬರುವ ಗಾಂಧಿನಗರ ಬಳಿ ಖಚಿತ ಮಾಹಿತಿ ಮೇರೆಗೆ ಸಾಗವಾನಿ,ಸಿಸಂ,ಹಾಗೂ ನಂದಿ ಕಟ್ಟಿಗೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ದಾಂಡೇಲಿಯ ಗಾಂಧಿನಗರದ ಆರೋಪಿಗಳನ್ನು ಬಂಧಿಸಲಾಗಿದೆ.
ಗಾಂಧಿನಗರದ ಕಾರ್ಪೆಂಟರ್ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಸಾಗುವಾನಿ,ಸಿಸಂ,ಹಾಗೂ ನಂದಿ ಜಾತಿಯ ಕಟ್ಟಿಗೆಗಳನ್ನು ಅಂದಾಜು ಮೌಲ್ಯ ೨ ಲಕ್ಷ ಆಗಿದ್ದು, ಆರೋಪಿಗಳಾದ ಮಾರುತಿ ನಾಗಪ್ಪ ಕಲಕುಂದ್ರಿ, ಜಾಪರ್ ಅಲಿ ಹನೀಪ್ ಸಾಗರ ಎಂಬ ಇಬ್ಬರು ಆರೋಪಿಗಳನ್ನು ವಾಹನ ಹಾಗೂ ಕಟ್ಟಿಗೆ ಕೊಯ್ಯುವ ಉಪಕಣಗಳ ಸಮೇತ ಬಂಧಿಸಿದ್ದಾರೆ.
ಈ ಸಂದರ್ಭದಲ್ಲಿ ಅಜ್ಜಯ್ಯ ಉಪವಲಯ ಅರಣ್ಯಧಿಕಾರಿ ಹಳಿಯಾಳ ವಿಭಾಗ,ಬಿ.ಎನ್.ವಿರೇಶ ಸಹಾಯ ಅರಣ್ಯ ಸಂರಕ್ಷಣಾ ಅಧಿಕಾರಿಗಳು ದಾಂಡೇಲಿ ಇವರ ಮಾರ್ಗದರ್ಶನದಲ್ಲಿ ವಿಷೇಶ ಶ್ರಮ ವಹಿಸಿ ದಾಂಡೇಲಿ ವಲಯ ಅರಣ್ಯಾಧಿಕಾರಿ ವಿನಯ ಭಟ್ಟ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಂತೋಷ ಜಿ. ಅನಿಲ ಆಚಾರಟ್ಟಿ,ಜ್ಯೋತಿ ನಂದಿಕೋಲ, ಯೋಗಿಶ್ ಜಿ.ನಾಯ್ಕ.ಸಂದೀಪ್ ಗೌಡ, ನಾರಾಯಣ ಜಿ.ದೀಪಕ,ಹನುಮಂತ ಎನ್ ಈ ಕಾರ್ಯಾಚರಣೆಯಲ್ಲಿ ಇದ್ದರು.
Leave a Comment