
ಹಳಿಯಾಳ;
ತಾಲೂಕಿನ ಮರ್ಕವಾಡ ಗ್ರಾಮದಲ್ಲಿ ಶುಕ್ರವಾರ ಮಧು ಕೆ. ಆರ್.ರವರ ಮಾಲೀಕತ್ವದ ಎಸ್ಎಲ್ಜೆ ಅಯ್ಯಂಗಾರ್ ಬೇಕರಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಹಾನಿಯಾಗಿದೆ.
ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಬಿದ್ದು 1 ಟಿವಿ, 2 ಫ್ರಿಜ್, ಗ್ಯಾಸ್ ಸಿಲಿಂಡರ್, ಬೇಕರಿ ಉತ್ಪನ್ನಗಳನ್ನು ತಯಾರಿಸುವ ಯಂತ್ರೋಪಕರಣಗಳು ಹಾಗೂ ಬೇಕರಿ ಉತ್ಪನ್ನಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಸ್ಥಳೀಯರು ಹಾಗೂ ಹಳಿಯಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದರಾದರೂ ಅμÉ್ಟೂತ್ತಿಗಾಗಲೇ ಅಗ್ನಿಜ್ವಾಲೆ ಬೇಕರಿಯ ಒಳಗಿನ ಎಲ್ಲವನ್ನು ಸುಟ್ಟು ಕರಕಲು ಮಾಡಿತ್ತು.
ಮೊದಲೆ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಈ ಮಾಲೀಕನಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು ಸರ್ಕಾರದಿಂದ ಪರಿಹಾರ ಕೊಡಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಮಾಡಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.


Leave a Comment