
ಚಿತ್ರ ಬಿಡಿಸಿದವರು: *ಚೈತ್ರಾ ಶೆಟ್ಟಿ*
ನಿನ್ನ ಬಿಟ್ಟು ಎಲ್ಲೂ ಹೋಗೆನು,ಗಟ್ಟಿಯಾಗಿ ತಬ್ಬಿ ನಾ ನಿನ್ನ ಬಿಡೆನು.ನಿನ್ನ ಪುಟ್ಟು ಮೇಲೆ ಅಪ್ಪಾ ಕೋಪವೇನು,ಸರಿಯಾಗಿ ಮಾತಾಡಲು ಅಪ್ಪಾ ನಿನ್ನಲೇನು?
ನಿನೆಂದರೆ ನನಗೆ ತುಂಬಾ ಪ್ರೀತಿ,ನೊಂದ ಮನಕೆ ನೀನು ನವಚೈತನ್ಯದ ಜನಕ.ನೆನಪೆಂದರೆ ನಿನಗೆ ಸಾಕಿ ಬೆಳೆಸಿದೆ ನನ್ನಾ ಎತ್ತಿ,ಕಂದ ಎಂದಿದ್ದು ನಾ ಮರೆಯನು ಕೊನೆತನಕ.
ಓದಲು ಕೊಡಿಸಿದ ಪಠ್ಯ-ಪುಸ್ತಕ,ಈ ತನುಜೆಗೆ ನೀ ಸಂಗೀತದ ಗಾಯಕ.ಕಾಪಾಡಲು ಬರುವ ರಕ್ಷಕ,ಈ ಮಗಳಿಗೆ ನೀ ಮೊದಲ ನಾಯಕ.
ಒಡೋಡಿ ಬಂದಾಗ ತಬ್ಬಿಕೊಂಡ ಸಾಹುಕಾರ,ಉಡುಗೊರೆಯ ನೀಡಿರುವೆ ಚಿನ್ನದ ಉಂಗುರ.ಕುಶಿಯನೀಡಿ ನಕ್ಕು ನಗಿಸುವ ಹಾಸ್ಯಗಾರ,ಸಂಜೆಯವೇಳೆ ತೋರಿಸುವೆ ಸಮುದ್ರ ಸಾಗರ.
Leave a Comment