ಚುಕ್ಕಿಗಳು
ಗಗನದ ತುಂಬಾ ಮಿನುಗುವ ಚುಕ್ಕಿ ಏನಿದೆ ನಿನ್ನನು ಮಿಕ್ಕಿ?ದೂರದಿ ಹೊಳೆಯುವ ತಾರೆಯೆ ನಿನ್ನನು ತರುವೆನು ನಾನು ಹೆಕ್ಕಿ ||ಪ||
ಒಂದೆಡೆ ಚಂದಮ ತಂಪನು ಸೂಸುವ ನಿನ್ನನು ಓರೆ ನೋಡಿ.ಮೋಡಗಳನ್ನು ಹೆದರಿಸಿ ಕಳುಹಿತೆ ನಿನ್ನಯ ಬೆಳಕಿನ ಮೋಡಿ.
ಅಮ್ಮನ ತಟ್ಟೆಯ ತುತ್ತಿಗೆ ಕಂಡಿತೆ, ನಿನ್ನಯ ಹೊಳಪಿನ ರಾಶಿ.ಆಗಸ ಮಾತೆಗೆ ರತ್ನವ ತೊಡಿಸಿದೆ ನೀನು ಪುಂಜದ ವೇಶಿ.
ಗದ್ದೆಯ ಕೆಲಸ ಮುಗಿಸಲು ಅಪ್ಪ ನೀನು ಮೇಲಕೆ ಬರುವೆ.ಅಮ್ಮನು ಕರೆದರೆ ಓಡುತ ಬಂದು ನೀರಲಿ ಮುಳುಗುತ ನಗುವೆ.
ಹತ್ತಿರ ಬಂದು ನಿನ್ನನು ಹಿಡಿಯುವ ಆಸೆಯು ಹೆಚ್ಚಿದೆ ನನಗೆ.ಬಿಡದಿರೆ ಛಲದಲಿ ಮುಟ್ಟುವೆ ನಿನ್ನ ಎಂದೋ ಮುಂದೆ ಕೊನೆಗೆ.
Leave a Comment