
ಎಲ್ಲೆಡೆ ಈ ಕೊರೋನಾ ವೈರಸ್ ಅಪಾಯಕಾರಿಯಾಗಿ ಅಟ್ಟಹಾಸದಿಂದ ಕಾಣದ ರೀತಿಯಲ್ಲಿ ಮೆರೆಯುತ್ತಿದೆ. ಪುರಾಣ ಪ್ರಸಿದ್ಧ ಐತಿಹಾಸಿಕ ಕ್ಷೇತ್ರವಾದ ಗೋಕರ್ಣದಲ್ಲಿ ಇವರೆಗೆ ಕೊರೋನಾ ವೈರಸ್ ಸೋಂಕಿನ ಒಂದೇ ಒಂದು ಪ್ರಕರಣ ಕಾಣದ ರೀತಿಯಲ್ಲಿ ಶ್ರಮಿಸುತ್ತಿದ್ದ ಇಲಾಖೆ ಎಂದರೆ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗೋಕರ್ಣದವರು.ಹೆಚ್ಚಾಗಿ ಹೇಳಬೇಕೆಂದರೆ ಗೋಕರ್ಣವು ಒಂದು ಪ್ರವಾಸಿ ತಾಣವಾಗಿದ್ದು, ದೇಶ-ವಿದೇಶದ ನಾನಾ ಕಡೆಗಳಿಂದ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವರು.ಲಾಕ್ ಡೌನ್ ಪ್ರಾರಂಭವಾದ ಕೆಲದಿನಗಳ ಹಿಂದೆ ಎಷ್ಟೋ ಜನರು ಗೋಕರ್ಣದಲ್ಲಿ ಕೊರೋನಾ ಇರುವುದು ಖಚಿತವೆಂದು ಭಾವಿಸಿದ್ದರು. ನನಗೂ ತುಂಬಾ ಜನರು ಮೊಬೈಲ್ ಕರೆ ಮೂಲಕ ಯಾರನ್ನು ಮುಟ್ಟಿಸಿಕೊಳ್ಳಬೇಡಾ! ನಿಮ್ಮ ಊರಿಗೆ ಬೆಳ್ಳಕ್ಕಿ ವಿದೇಶಿಯರು ಹಾಗೂ ಮತ್ತಿತ್ತರರು ಬರುವುದು ತುಂಬಾ ಜಾಸ್ತಿ ಅವರ ಮುಖಾಂತರ ಕೊರೋನಾ ವೈರಸ್ ಹರಡಿರಬಹುದು ಎಚ್ಚರವಿರಲಿ ಎಂದು ನನಗೆ ಸೂಚನೆ ತಿಳಿಸಿದ್ದು ಇರುತ್ತದೆ.

ಆದರೆ ಹೆಮ್ಮೆಯ ವಿಷಯವೆಂದರೆ ಈವರೆಗೆ ಗೋಕರ್ಣದಲ್ಲಿ ಒಂದು ಕೊರೋನಾ ಪ್ರಕರಣ ಪತ್ತೆಯಾಗದಿರುವುದು ನಮ್ಮ ಊರಿನ ಅದೃಷ್ಟ ಚೆನ್ನಾಗಿದೆ ಎನ್ನಬಹುದು.ಈ ಸಂತಸದ ಹೆಮ್ಮೆಯ ವಿಷಯಕ್ಕೆ ಕಾರಣರಾದವರು ನಮ್ಮೂರ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ. ಹೌದು ಆತ್ಮೀಯರೇ, ನಮ್ಮೂರು ಇಂದು ಕೊರೋನಾ ಚಿಂತೆಯಿಲ್ಲದೆ ನಾವೆಲ್ಲರೂ ನಿಶ್ಚಿಂತೆಯಾಗಿ ನಿದ್ದೆ ಮಾಡುತ್ತಿದ್ದೇವೆ ಎನ್ನಲು ಕಾರಣ ಈ ವೈದ್ಯರು. ಕೊರೋನಾ ವೈರಸ್ ಕುರಿತಂತೆ ಅಪಾಯಕಾರಿ ಸುದ್ದಿಗಳು ಹೊರಬೀಳುತ್ತಿದ್ದಂತೆಯೇ ಎಚ್ಚೆತ್ತು ಕೊಂಡು ಗೋಕರ್ಣದ ಗತಿ ಏನು? ಜನರ ಪರಿಸ್ಥಿತಿ ಎಲ್ಲಿಗೆ ತಲುಪುವುದು? ಎಂದು ಕರ್ತವ್ಯವೇ ದೇವರೆಂದು ನಂಬಿರುವ ಹೃದಯವಂತ ವೈದ್ಯ ಜಗದೀಶ ನಾಯ್ಕ.ಕೊರೋನಾ ಸೋಂಕಿತರ ಚಿಕಿತ್ಸೆ ಮಾಡುತ್ತಿರುವ ಕಾರಣಕ್ಕೆ ಇವರು ತಮ್ಮ ಕುಟುಂಬದ ಸದಸ್ಯರಿಂದಲೂ ದೂರವಿದ್ದು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಈ ಕ್ಷೇತ್ರಕ್ಕೆ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿದ್ದು, ಬಡ ಜನರಿಗೆ, ಕುಟುಂಬಗಳಿಗೆ ನಿರಂತರ ಹಾಗೂ ಪರಿಪೂರ್ಣ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತಿದ್ದು, ಆಸ್ಪತ್ರೆಗೆ ಯಾವುದೇ ವ್ಯಕ್ತಿಗಾಗಲಿ ಈ ವೈದ್ಯರು ಲವಲವಿಕೆಯಿಂದ ಮಾತನಾಡಿಸಿ ನಿಸ್ವಾರ್ಥ ಮನೋಭಾವನೆಯಿಂದ ಚಿಕಿತ್ಸೆ ನೀಡುವರು. ಹಾಗೂ ಪ್ರಾ.ಆ.ಕೇಂದ್ರದಲ್ಲಿ ದಿನವೂ ತುಂಬಿರುವ ಓಪಿಡಿ ಜೊತೆಗೆ ಸುಶ್ರುಶಕಿಯರೊಂದಿಗೆ ಹೆರಿಗೆ ನಿರ್ವಹಣೆ ಸಹಕಾರ, ಪೊಲೀಸ್ ಪ್ರಕರಣ, ಅಪಘಾತದ ಹಲ್ಲೆ, ತುರ್ತು ಚಿಕಿತ್ಸೆ, ಶವಪರೀಕ್ಷೆ, ಹಾಗೂ ಮುಂತಾದ ವೈದ್ಯಕೀಯ ಕರ್ತವ್ಯವನ್ನು ರಜಾದಿನಗಳಲ್ಲಿ ಕೇಂದ್ರಸ್ಥಾನದಲ್ಲಿದ್ದು ರೋಗಿಗಳಿಗೆ ಫೋನ್, ವಾಟ್ಸಾಪ್ ಮೂಲಕವೂ ಸಲಹೆ ನೀಡುವ ಗುಣ ಇವರದು.ಇಂತಹ ವೈದ್ಯರು ನಮ್ಮೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನಮಗೆಲ್ಲಾ ಹೆಮ್ಮೆ ಎನ್ನಬಹುದು.ಕೊರೋನಾ ವೈರಸ್ ಜಗತ್ತಿನಾದ್ಯಂತ ಹರಡುತ್ತಿದ್ದು, ಗೋಕರ್ಣದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಕುಡ್ಲೆ ಕಡಲತೀರದಲ್ಲಿ ಚೀನಾದವರ ತಪಾಷಣೆ ನಡೆಸಿ ಸಂದರ್ಶನ ಮಾಡಿದರು. ಇದನ್ನು ಇಲ್ಲಿಯ ಜನರು ಆತಂಕ ಪಡಬಹುದುದೆಂದು ಇದುವರೆಗೂ ಇದನ್ನು ಗುಪ್ತವಾಗಿಟ್ಟು ಎಲ್ಲಾ ವಿದೇಶಿಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ಅವರಲ್ಲಿ ಕೊರೋನಾ ವೈರಸ್ ಇದೆಯೋ? ಇಲ್ಲವೋ? ಎಂಬುದನ್ನು ಪತ್ತೆಹಚ್ಚುತ್ತಾ ಗೋಕರ್ಣ ಕ್ಷೇತ್ರವನ್ನು ಸುರಕ್ಷಿತವಾಗಿ ಇಟ್ಟಿರುವ ವೈದ್ಯ ಜಗದೀಶ ನಾಯ್ಕ.ಇವರ ಜೊತೆ ಪ್ರಾ.ಆ.ಕೇಂದ್ರ ಗೋಕರ್ಣದ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಮತ್ತು ಗೋಕರ್ಣ ಪಿ.ಎಸ್.ಐ ನವೀನ ನಾಯ್ಕರವರ ತಂಡವು ಕೈಜೊಡಿಸಿ ಗೋಕರ್ಣವನ್ನು ಸುರಕ್ಷಿತವಾಗಿಡಿಸಿದ್ದಾರೆ.ಇತ್ತಿಚ್ಚಿನ ದಿನಗಳಲ್ಲಿ ಬೇರೆ ಬೇರೆ ಊರಿನಿಂದ ಇಲ್ಲಿಗೆ ಬಂದು ತಲುಪಿದ ಜನರನ್ನು ಪತ್ತೆ ಹಚ್ಚಿ ಇವರಿಗೆ ಕೊರೋನಾ ವೈರಸ್ ಇದೆ ಇಲ್ಲವೊ? ಎಂದು ಪರೀಕ್ಷಿಸಿ ಕಂಗಾಲಾದ ಗೋಕರ್ಣದ ಜನತೆಗೆ ಭಯದ ಭೀತಿ ಹೋಗಲಾಡಿಸಿದರು.ಈ ವೈದ್ಯರ ತಂಡವು ಕೊರೋನ ವೈರಸ್‌ನಂತಹ ಮಾರಕ ರೋಗದಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಮನೆ ಮನೆಗಳಲ್ಲಿ ತೆರಳಿ ಅನಾರೋಗ್ಯದ ಸ್ಥಿತಿ ಕಂಡು ಬಂದಲ್ಲಿ ಆರೋಗ್ಯ ತಪಾಸಣೆ ಮಾಡುವ ಕೆಲಸವನ್ನು ಹಗಲು ರಾತ್ರಿ ಶ್ರಮಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇಂದಿಗೂ ನಾವು ಈ ಗ್ರಾಮದಲ್ಲಿ ಆರಾಮಾಗಿದ್ದೇವೆ ಎಂದರೆ ಅದಕ್ಕೆಲ್ಲಾ ಕಾರಣ ಈ ಎಲ್ಲಾ ಶ್ರಮಿಕರು. ನಿಮ್ಮೆಲ್ಲರ ಅಪಾರ ಸೇವೆಯನ್ನು ಎಂದಿಗೂ ಮರೆಯದೆ ನಿಮ್ಮ ಸೇವಾ ಮನೋಭಾವನೆಯನ್ನು ಮೆಚ್ಚಿ ಗೌರವಿಸಿ, ತುಂಬು ಹೃದಯದ ಧನ್ಯವಾದಗಳನ್ನು ಹೇಳುತ್ತೇನೆ.

Leave a Comment