
ಬೆಂಗಳೂರು :- #ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ಗುರೂಜೀ ಯವರ ” ಆರ್ಟ್ ಆಫ್ ಲಿವಿಂಗ್ ” ಆಶ್ರಮಕ್ಕೆ ಸಚಿವರಾದ ಶಿವರಾಮ ಹೆಬ್ಬಾರ ಅವರು ಇಂದು ಭೇಟಿ ನೀಡಿ ಗುರೂಜಿ ಅವರ ಆಶೀರ್ವಾದವನ್ನು ಪಡೆದರು.
ಈ ಸಂದರ್ಭದಲ್ಲಿ ಆಶ್ರಮದ ಅಡುಗೆ ಕೊಠಡಿಗೆ ಸಚಿವರು ಭೇಟಿ ನೀಡಿ, ಅತ್ಯಂತ ಸ್ವಚ್ಛ ಪರಿಸರದಲ್ಲಿ, ನೂತನ ತಂತ್ರಜ್ಞಾನವನ್ನು ಬಳಸಿ ಊಟವನ್ನು ತಯಾರಿಸಲಾಗುತ್ತಿರುವದನ್ನು ಪರಿಶೀಲಿಲನೆ ನಡೆಸಿದರು.
ಹಸಿದರಿಗೆ ಅನ್ನ ನೀಡಬೇಕು ಎಂದು ಉದ್ದೇಶದಿಂದ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಕಾರ್ಮಿಕ ಇಲಾಖೆಯಿಂದ ಪ್ರಾರಂಭಿಸಿರುವ ದಾಸೋಹ ಕಾರ್ಯಕ್ರಮಕ್ಕೆ ತಮ್ಮ ಸಹಭಾಗಿತ್ವ ನೀಡುತ್ತಿರುವ ಶ್ರೀ ಶ್ರೀ ರವಿಶಂಕರ ಗುರೂಜಿ ಅವರಿಗೆ ಸಚಿವರು ಅಭಿನಂದನೆಯನ್ನು ಸಲ್ಲಿಸಿದರು.


Leave a Comment