
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಮುದ್ರಣ ಹಾಗೂ ದೃಶ್ಯ ಮಾಧ್ಯಮದವರು ಉತ್ತಮ ಸಹಕಾರ ನೀಡಿದ್ದಾರೆಂದು ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್ ಅವರು ಮುಕ್ತ ಕಂಠದಿಂದ ಶ್ಲಾಘೀಸಿದರು.
ಪಟ್ಟಣಕ್ಕೆ ಭೇಟಿ ನೀಡಿದ ಅವರು ತಾಲೂಕಿನ ಚೆಕ್ಪೊಸ್ಟ್ಗಳಿಗೆ ಭೇಟಿ ನೀಡಿ ಹಳಿಯಾಳದಲ್ಲಿ ಕೊವಿಡ್-19 ನಿಯಂತ್ರಿಸುವಲ್ಲಿ ಪೋಲಿಸ್ ಇಲಾಖೆ ಹಾಗೂ ತಾಲೂಕಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಬಳಿಕ ಮಿನಿ ವಿಧಾನಸೌಧದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.
ಕೊವಿಡ್-19 ವಿರುದ್ದದ ಸಮರದಲ್ಲಿ ಕಂದಾಯ, ಪೋಲಿಸ್, ಅಂಗನವಾಡಿ, ಆಶಾ, ಆರೋಗ್ಯ, ಅರಣ್ಯ ಇಲಾಖೆ, ಪುರಸಭೆ ಸಿಬ್ಬಂದಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದು ಅವರೆಲ್ಲರಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಡಾ.ಹರಿಶಕುಮಾರ, ಜಿಪಂ ಸಿಇಓ ರೋಷನ್ ಹಾಗೂ ತಾವು ಮುಂದಾಲೋಚನೆಯಿಂದ ಕೆಲವು ಕ್ರಮಗಳನ್ನು ಜಾರಿಗೊಳಿಸಿದ್ದರಿಂದ ಇದಕ್ಕೆ ಎಲ್ಲರೂ ಉತ್ತಮ ಸಹಕಾರ ನೀಡಿದ್ದರಿಂದ ಇಲ್ಲಿಯವರೆಗೆ ಕೊರೊನಾ ನಿಯಂತ್ರಿಸುವಲ್ಲಿ ಸಫಲರಾಗಿದ್ದೇವೆ.
ದಿ.23 ರಿಂದ ರಾಜ್ಯ ಸರ್ಕಾರ ಕೆಲವು ವಿನಾಯತಿಗಳನ್ನು ನೀಡಿದ್ದು ಯಾರಿಗೆಲ್ಲಾ ವಿನಾಯತಿ ಹಾಗೂ ಯಾವ ರೀತಿ ಜನ ಅದನ್ನು ಪಾಲಿಸಬೇಕು ಎನ್ನುವ ಬಗ್ಗೆ ಪ್ರತಿ ತಾಲೂಕಿಗೆ 5-6 ಸಾವಿರ ಕರಪತ್ರಗಳನ್ನು ಹಂಚುವ ಮೂಲಕ, ಮೈಕ-ಅನೌಂನ್ಸಮೆಂಟ್ ಮೂಲಕ ಜಾಗೃತಿ ಮೂಡಿಸಲಾಗುವುದು ಇದನ್ನು ಹೊರತು ಪಡಿಸಿ ಅನಾವಶ್ಯಕವಾಗಿ ಯಾರು ಹೊರಗೆ ಬರುವಂತಿಲ್ಲ ಲಾಕ್ಡೌನ್ ಅನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ಕೊರೊನಾ ವಾರಿಯರ್ಸ್ಗಳು, ಪೋಲಿಸರ ಮೇಲೆ ಹಲ್ಲೆ ನಡೆಸುವವರ ಮೇಲೆ ಕಠಿಣ ಕ್ರಮ ಜರುಗಿಸುವ ಸುಗ್ರಿವಾಜ್ಞೆಯನ್ನು ಸರ್ಕಾರ ಜಾರಿಗೆ ತಂದಿದ್ದು ಇದರಿಂದ ವಾರಿಯರ್ಸ್ಗಳಿಗೆ ಹೆಚ್ಚಿನ ಶಕ್ತಿ ದೊರೆಯಲಿದೆ ಸರ್ಕಾರದ ನಿರ್ಧಾರ ಅಭಿನಂದನಾರ್ಹ ಎಂದು ಸಂತಸ ವ್ಯಕ್ತಪಡಿಸಿದರು.
ಅಂತರಾಜ್ಯ ಕಾರ್ಮಿಕರಿಗೆ ಪರವಾನಿಗೆ ಇಲ್ಲ, ಬೆರೆ ಜಿಲ್ಲೆಗಳಿಗೆ ಹೊಗಬೇಕಾದರೇ ಪರವಾನಿಗೆ ನೀಡುತ್ತೇವೆ ಅಲ್ಲದೇ ಜಿಲ್ಲೆಯ ಎಲ್ಲೆಡೆ ಕಾರ್ಮಿಕರಿಗೆ ತೊಂದರೆ ಆಗದಂತೆ ನೊಡಿಕೊಳ್ಳಲಾಗಿದೆ ಎಂದ ಎಸ್ಪಿ ಪ್ರತಿನಿತ್ಯ ತರಕಾರಿ ಹಾಗೂ ಕಿರಾಣಿ, ದಿನಸಿ ಅವಶ್ಯಕ ವಸ್ತು ತರಲು ಹುಬ್ಬಳ್ಳಿ,ಧಾರವಾಡ, ಬೆಳಗಾವಿಗೆ ಹೊಗುವ ವಾಹನಗಳಿಗೆ ಹಳಿಯಾಳದ ಗಡಿಯ ಚೆಕ್ಪೊಸ್ಟ್ಗಳಲ್ಲಿ ಸ್ಯಾನಿಟೈಸಿಂಗ್ ಮಾಡುವ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ ಹಾಗೂ ಪೋಲಿಸರಿಗೆ ಸೂಚಿಸಿದರು.
ರೈತರಿಗೆ ಹಸಿರು ಪಾಸ್ ನೀಡುವ ಚಿಂತನೆ ನಡೆದಿದೆ, ಸರ್ಕಾರದ ಆದೇಶದಂತೆ ಯಾರಿಗೆಲ್ಲ ವಿನಾಯಿತಿ ಇದೆ ಅವರಿಗೆಲ್ಲ ಪಾಸ್ ಮೂಲಕ ಕೆಲಸಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದ ಶಿವಪ್ರಕಾಶ ದೇವರಾಜ ಅವರು ಸದ್ಯ ಜಾರಿಯಲ್ಲಿರುವ ಮನೆಮನೆಗೆ ಕಿರಾಣಿ ಹಾಗೂ ತರಕಾರಿ ನಿರಂತರವಾಗಿ ಮುಂದುವರೆಯಲಿದ್ದು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಇಲಾಖೆಗಳ ಕಣ್ಣುತಪ್ಪಿಸಿ ಕಳ್ಳದಾರಿಯಿಂದ ಊರುಗಳಿಗೆ ಬರುವ ಜನತೆಯ ಬಗ್ಗೆ ಇಲಾಖೆಗಳಿಗೆ ತಕ್ಷಣ ಮಾಹಿತಿ ನೀಡಿ ಸಹಕಾರ ನೀಡುವಂತೆ ಜನರಲ್ಲಿ ವಿನಂತಿಸಿದರು.
ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ಡಿವೈಎಸ್ಪಿ ಮೊಹನಪ್ರಸಾತ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಸಿಪಿಐ ಬಿಎಸ್ ಲೋಕಾಪುರ, ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರ, ರಾಜಕುಮಾರ ಇದ್ದರು.
Leave a Comment