
ಹಳಿಯಾಳ:- ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಕಳೆದ ಮಾರ್ಚ ತಿಂಗಳಿನಲ್ಲಿ ನಡೆದ ಅವಿವಾಹಿತ ಗರ್ಭೀಣಿ ಯುವತಿಯೊರ್ವಳು ಸಾವಿಗಿಡಾದ ವಿಚಿತ್ರ ಮತ್ತು ಅಪರೂಪದ ಅಪರಾಧ ಪ್ರಕರಣವೊಂದಕ್ಕೆ ಹೊಸ ತಿರುವು ದೊರೆತಿದ್ದು ಆಕೆಯ ಪ್ರೇಮಿ ಈಗ ಅಂದರ್ ಆಗಿದ್ದಾನೆ.
ಮಾರ್ಚ ತಿಂಗಳ 9 ರಂದು ನಡೆದ ಘಟನೆ ಇದಾಗಿದ್ದು ಬೆಳವಟಗಿಯ ಅವಿವಾಹಿತ ಶಾಹಿಸ್ ಗರ್ಭೀಣಿ ಯುವತಿಯೊರ್ವಳು ಚಹಾ ಮಾಡುವಾಗ ಆಕಸ್ಮಿಕವಾಗಿ ಆಕೆಯ ಬಟ್ಟೆಗೆ ಬೆಂಕಿ ತಗುಲಿ ತೀವೃವಾಗಿ ಸುಟ್ಟ ಗಾಯಗಳೊಂದಿಗೆ ಒಂದು ವಾರಗಳ ಕಾಲ ನರಳಾಡಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಳು.
ಈದೀಗ ಈ ಪ್ರಕರಣಕ್ಕೆ ತಿರುವು ದೊರೆತಿದ್ದು ಅದೇ ಗ್ರಾಮದ ಆಕೆಯ ಪ್ರಿಯಕರ ಮಂಜುನಾಥ ಪರಸೊಜಿ ಎನ್ನುವವನನ್ನು ಪೊಕ್ಸೊ ಕಾಯ್ದೆಯಡಿ ಹಳಿಯಾಳ ಪೋಲಿಸರು ಬಂಧಿಸಿದ್ದಾರೆ. ಇನ್ನೊರ್ವ ಆರೋಪಿ ಮಹೇಬೂಬಸಾಬ ನಮಾಜಸಾಬ ಅಂಗಡಿಕಾರ ಎಂಬಾತ ಇತ್ತೀಚೆಗೆ ವಿದೇಶಕ್ಕೆ ಕೆಲಸಕ್ಕೆ ತೆರಳಿದ್ದಾನೆಂಬ ಮಾಹಿತಿ ಇದ್ದು ಆತನನ್ನು ಬಂಧಿಸಲಾಗುವುದೆಂದು ಪೋಲಿಸರು ತಿಳಿಸಿದ್ದಾರೆ.
ಮೃತಪಟ್ಟ ಯುವತಿ ಅವಿವಾಹಿತಳಾಗಿದ್ದು ತೀವೃ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಅವಧಿಪೂರ್ವ ನಿರ್ಜಿವ ಭ್ರೂಣಕ್ಕೆ ಜನ್ಮ ನೀಡಿದ್ದಳು. ಮದುವೆಯಾಗದೆ ಈಕೆ ಗರ್ಭೀಣಿಯಾಗಿದ್ದು ಹೇಗೆ ಇದರ ಹಿಂದಿನ ಕತೆ ಏನು ಎಂದು ಪೋಲಿಸರು ತನಿಖೆ ಆರಂಭಿಸಿದಾಗ ಸಾಯುವ ಮುನ್ನ ಯುವತಿ ಹಲವು ಹೇಳಿಕೆಗಳನ್ನು ನೀಡಿದ್ದಳು. ಆದರೇ ಪೋಲಿಸರು ಗ್ರಾಮದಲ್ಲಿಯು ಹಲವು ಮಾಹಿತಿಗಳನ್ನು ಕಲೆ ಹಾಕಿದಾಗ ಆಕೆಯ ಪ್ರೇಮಿ ಮಂಜುನಾಥ ಆಗಿದ್ದ ಎಂದು ತಿಳಿದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದು ಆತ ಕೆಲಸಕ್ಕೆ ಬೆರೆಡೆ ತೆರಳಿದ ಬಳಿಕ ಮಹೇಬೂಬಸಾಬ ಎನ್ನುವಾತನೊಂದಿಗೆ ಆಕೆ ಪ್ರೇಮಿಸುತ್ತಿದ್ದಳು ಎಂದು ಮಂಜುನಾಥ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಸಿಪಿಐ ಬಿಎಸ್ ಲೋಕಾಪುರ ತಿಳಿಸಿದರು.
ವಿಚಿತ್ರ ಹಾಗೂ ಅಪರೂಪದ ಪ್ರಕರಣವಾಗಿರುವ ಈ ಘಟನೆಯಲ್ಲಿ ಯುವತಿ ಏನೋ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಳು ಆದರೇ ಆಕೆ ಹಿಂದೆ ಪ್ರತಿಸುತ್ತಿದ್ದ, ದೈಹಿಕ ಸಂಬಂಧ ಹೊಂದಿದ ಯುವಕರು ಈಗ ಪೊಕ್ಸೊ ಕಾಯ್ದೆಯಡಿ ಆರೋಪಿಗಳಾಗಿದ್ದು ಜೈಲಿನ ಕಂಬಿ ಎಣಿಸಬೇಕಾಗಿದೆ. ಬಲು ಅಪರೂಪದಲ್ಲೇ ಅಪರೂಪದ ವಿಚಿತ್ರ ಘಟನೆ ಇದಾಗಿದ್ದು ಆಕೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದರು ಕೂಡ ಆಕೆಯೊಂದಿಗೆ ಅಪ್ರಾವ್ತ ವಯಸ್ಸಿನಲ್ಲಿ ದೈಹಿಕ ಸಂಬಂಧ ಹೊಂದಿ ಗರ್ಭೀಣಿಯನ್ನಾಗಿ ಮಾಡಿದ್ದಕ್ಕಾಗಿ ಬಲಾತ್ಕಾರದ ಪ್ರಕರಣ ಯುವಕರ ಮೇಲೆ ದಾಖಲಾಗಿದೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್,ಡಿವೈಎಸ್ಪಿ ಮೋಹನಪ್ರಸಾತ್, ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಸಿಪಿಐ ಲೋಕಾಪುರ ಬಿಎಸ್ ನೇತೃತ್ವದಲ್ಲಿ ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರ, ರಾಜಕುಮಾರ, ಸಿಬ್ಬಂದಿಗಳಾದ ಪರಶುರಾಮ ಸೊಲ್ಲಾಪುರಿ, ಪ್ರಕಾಶ ಮೂಳೆ,ರಾಜೇಶ ನಾಯಕ, ಅಶೋಕ ಹುಬ್ಬಳ್ಳಿ, ಎಮ್.ಎಮ್.ಮುಲ್ಲಾ, ಬಸವರಾಜ ಚೆನ್ನಪ್ಪಗೊಳ, ರಾಚಪ್ಪ ಧನಗರ, ಬಸವರಾಜ ವಾಲಿಶೆಟ್ಟರ್, ನಿಂಗಪ್ಪಾ ಬಳ್ಳಾರಿ, ನವೊಮಿ ರುಝಾರಿಯೋ,ಶ್ರೀಶೈಲ್ ಮಂಗಾನವರ, ಗರುರಾಜ ಬಿಷ್ಟನ್ನವರ್, ಜಗದೀಶ ಕುಂಬಾರ, ಶಂಕರಲಿಂಗ ಕ್ಷತ್ರಿ, ಬಸವರಾಜ ಎಸ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Leave a Comment