
#ಕಾರವಾರ : #ಭಟ್ಕಳದ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ #ಬಿಡುಗಡೆಯಾದರು. ಅವರನ್ನು ಇನ್ನೂ ೧೪ ದಿನ ಹೋಂ ಕ್ವಾರಂಟೈನ್ ದಲ್ಲಿ ಇಡಲಾಗುವುದು ಎಂದು #ಜಿಲ್ಲಾಡಳಿತ #ತಿಳಿಸಿದೆ.
ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಭಟ್ಕಳದ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನ ಭಟ್ಕಳದ ಫೆಸಿಲಿಟೇಶನ್ ಕೇಂದ್ರದಲ್ಲಿ ಮತ್ತೆ ೧೪ ದಿನ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಬಹುತೇಕ ಕೊರೋನಾ ಸೋಂಕಿತರಿಗೆ ಕಾರವಾರದ ಐಎನ್ ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಮಹಿಳೆ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವೈದ್ಯಕೀಯ ಸೌಲಭ್ಯದ ಅಗತ್ಯ ಕಂಡುಬಂದಿದ್ದು ಉಡುಪಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಗುಣಮುಖರಾದ ಮಹಿಳೆಯನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಮತ್ತಿತರ ಹಿರಿಯ ಅಧಿಕಾರಿಗಳು ಮನೆಗೆ ಕಳುಹಿಸಿಕೊಟ್ಟರು.
ಇದರೊಂದಿಗೆ ಜಿಲ್ಲೆಯ ಒಟ್ಟು 11 ಸೊಂಕಿತರಲ್ಲಿ 10 ಜನ ಗುಣಮುಖರಾದಂತಾಗಿದೆ. ಶುಕ್ರವಾರ ಗುಣಮುಖರಾದ ಗರ್ಭಿಣಿ ಮಹಿಳೆಯ ಪತಿ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಕಾರವಾರದ ಪತಂಜಲಿ ನೇವಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲೆಯ
ಏಕೈಕ ಸೋಂಕಿತ ವ್ಯಕ್ತಿಯಾಗಿದ್ದಾರೆ.
ಅವರೂ ಸಹ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ಬಹುಬೇಗ ಗುಣಮುಖರಾಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
Leave a Comment