ಕುಮಟಾ : ಉತ್ತರಕನ್ನಡದ ಭಟ್ಕಳದಲ್ಲಿ ತನ್ನ ಕಬಂದ ಬಾಹು ಚಾಚಿರುವ ಕೊರೊನಾ ಇದೀಗ ಕುಮಟಾದಲ್ಲಿಯೂ ತನ್ನ ಮೊದಲ ಖಾತೆ ತೆರೆದಿದೆ. ಇದು ಕುಮಟಾ ಜನರ ನಿದ್ದೆಗೆಡಿಸಿದೆ.
ಕೊರೊನಾ ಭಯದಲ್ಲಿಯೇ ಬದುಕುತ್ತಿರುವ ಕುಮಟಾ ಜನರಿಗೆ ಇದು ಆತಂಕವನ್ನು ಉಂಟು ಮಾಡಿದೆ.
ತಾಲೂಕಿನ ವ್ಯಕ್ತಿ ಕಳೆದ ಮೇ 5 ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ಬಂದಿದ್ದ 26 ವರ್ಷದ ಯುವಕನನ್ನು ಕ್ವಾರಂಟೈನ್ ಸೆಂಟರಿಗೆ ಕಳಿಸಲಾಗಿತ್ತು. ಇದೀಗ ಅವರ ಕೊರೊನಾ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದ್ದು p-946 ಆಗಿದ್ದಾನೆ.
ಮೇ 5ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ವಾಪಸ್ಸಾಗಿದ್ದ ವ್ಯಕ್ತಿಯು, ಎಲ್ಲೂ ತಿರುಗಾಡದೆ ತಪಾಸಣೆಗೆ ಒಳಗಾಗಿ ನೇರವಾಗಿ ಬಂದು ಕುಮಟಾದಲ್ಲಿದ್ದ ಸರ್ಕಾರಿ ಕ್ವಾರಂಟೈನ್ನಲ್ಲಿದ್ದ. ವ್ಯಕ್ತಿಯ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಕೋವಿಡ್- 19 ಇರುವುದು ದೃಢಪಟ್ಟಿದೆ.
ಈತ ಕ್ವಾರಂಟೈನ್ನಲ್ಲಿದ್ದವರೊಂದಿಗೂ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಇದೀಗ ಅವನೊಂದಿಗೆ ಕ್ವಾರಂಟೈನ್ ಆದವರಲ್ಲೂ ಆತಂಕ ಹೆಚ್ಚಾಗಿದೆ. ಈತನೊಂದಿಗೆ ಕ್ವಾರಂಟೈನ್ ನಲ್ಲಿದ್ದ ಇನ್ನು ಕೆಲವರು ತಮ್ಮ ಕ್ವಾರಂಟೈನ್ ಅವಧಿ ಮುಗಿಸಿ ಬಿಡುಗಡೆ ಹೊಂದಿ ಮನೆಗೆ ತೆರಳಿದ್ದರು ಎನ್ನಲಾಗಿದೆ.
ಯಾರೂ ಆಘಾತ ಪಡುವುದು ಬೇಡ.ಅವರನ್ನು ಕ್ವಾರಂಟೈನ್ ಮಾಡಿದ್ದು ಅನಗತ್ಯ ಗೊಂದಲ ಬೇಡ, ಬೆರೆ ಗಾಳಿ ಸುದ್ದಿಗೆ ಅವಕಾಶ ಬೇಡ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
Leave a Comment