
#ಹಳಿಯಾಳ_ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ
#ಯಲ್ಲಾಪುರ, #ದಾಂಡೇಲಿ, #ಹೊನ್ನಾವರ ಹಾಗೂ #ಜೊಯಿಡಾದಲ್ಲಿ ತಲಾ ಒಂದೊಂದು ಕೊವಿಡ್-19 ಕೇಸ್ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಸೊಂಕಿತರ ಸಂಖ್ಯೆ 45 ಕ್ಕೆ ಏರಿಕೆಯಾಗಿದೆ.
ಓರ್ವ ಯುವಕ ಹಾಗೂ ಮೂವರು ಮಹಿಳೆಯರಲ್ಲಿ
ಕೊರೋನಾ ಸೊಂಕು ಕಾಣಿಸಿಕೊಂಡಿದೆ.
ಸದ್ಯ ಉತ್ತರ ಕನ್ನಡದಲ್ಲಿ 56 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 11 ಜನ ಗುಣಮುಖರಾಗಿ ಮನೆ ಸೇರಿದ್ದಾರೆ.
ಯಲ್ಲಾಪುರ, ದಾಂಡೇಲಿ, ಹೊನ್ನಾವರ ಹಾಗೂ ಜೊಯಿಡಾದಲ್ಲಿ ತಲಾ ಒಂದೊಂದು ಕೇಸ್ ಪತ್ತೆಯಾಗಿದೆ.ಕರೋನಾ ಸೋಂಕಿತರು ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನಿಂದ ಬಂದವರಾಗಿದ್ದಾರೆ.
ಯಲ್ಲಾಪುರದ ಉಪಳೇಶ್ವರದ 16 ವರ್ಷದ ಯುವತಿ.ದಾಂಡೇಲಿ ಪಟ್ಟಣದ ಹಳೆ ದಾಂಡೇಲಿಯ ಲಾರಿ ಚಾಲಕ,ತಮಿಳುನಾಡಿನ ಮಧುರೈನಿಂದ
ಜೋಯಿಡಾಕ್ಕೆ ಬಂದಿರುವ 31 ವರ್ಷದ ಮಹಿಳೆ
ಹೊನ್ನಾವರ ಮೂಲದ ಯುವತಿಗೂ ಕರೋನಾ ಸೊಂಕು ಕನ್ಫರಮ್ ಆಗಿದೆ.
ಇಂದು ಮಂಗಳವಾರ ಪತ್ತೆಯಾದ ಸೊಂಕಿತರಾದವರೆಲ್ಲರೂ ಕ್ವಾರಂಟೈನ್ ನಲ್ಲಿ ಇದ್ದವರಾಗಿದ್ದಾರೆ ಎಂಬುದು ಜನರು ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Leave a Comment