
ಉತ್ತರ ಕನ್ನಡ:- ಆತಂಕದಿಂದ ಹೊರಗಿನಿಂದ ಬರುವ ಜನರು ಸ್ವಯಂಪ್ರೇರಣೆಯಿಂದ ವರದಿ ಮಾಡಿಕೊಳ್ಳಬೇಕು.
ಒಂದಾನುವೇಳೆ ಉದ್ದೇಶಪೂರ್ವಕವಾಗಿ ಚೆಕ್‌ಪೋಸ್ಟ್‌ಗಳಿಂದ ತಪ್ಪಿಸಿಕೊಂಡು ಒಳಗೆ ಬರುವುದು ಕಂಡು ಬಂದರೇ ಇದು ಬಹಳ ಗಂಭೀರವಾದ ವಿಷಯವಾಗಿದ್ದು, ಅಂತಹ ಒಬ್ಬ ವ್ಯಕ್ತಿ ಮತ್ತು ಅವನಿಗೆ ಸಹಾಯ ಮಾಡಿದ ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ 9 ಪ್ರಕರಣ, ಮಂಗಳವಾರ 4 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.
ಎಲ್ಲಾ ಪ್ರಕರಣಗಳು ಹೊರಗಿನಿಂದ ಪ್ರಯಾಣದ ಇತಿಹಾಸವನ್ನು ಹೊಂದಿರುವುದರಿಂದ ಮತ್ತು ಅವುಗಳು ಈಗಾಗಲೇ ನಿರ್ಬಂಧಿತವಾಗಿದ್ದರಿಂದ ಭಯಪಡುವ ಅಗತ್ಯವಿಲ್ಲ ಎಂದಿರುವ ಎಸ್ಪಿ ಆದಾಗ್ಯೂ
ಅಧಿಕಾರಿಗಳಿಗೆ ವರದಿ ಮಾಡದಿರುವುದು ಎಂದರೆ ನೀವು ಒಟ್ಟು ಜಿಲ್ಲೆಗೆ ಅಪಾಯವನ್ನುಂಟು ಮಾಡುತ್ತಿದ್ದೀರಿ ಎಂದರ್ಥ ಅದಕ್ಕಾಗಿ
ಜನರು ಜಾಗರೂಕರಾಗಿರಬೇಕು ಎಂದು ಕರೆ ನೀಡಿದ್ದಾರೆ.
Leave a Comment