
ಆ ಸೂರ್ಯನ ಮುಸಂಜ್ಜೆಯ ಬೆಳಕಿನಲಿ,ಚಿಟ್ಟೆಗಳ ಗುಂಪನು ಹಾರಿಸುವೆ ಗಗನದಲಿ.ನನ್ನಯ ನಲಿವಿಗೆ ನಾಚಿತು ಜಗವೆಲ್ಲವು,ಬೀಸೊ ತಂಗಾಳಿಗೆ ತೇಲಿತು ಮನಸೆಲ್ಲವು.||
ಹೊತ್ತು ಹಿಂತಿರುಗಿ ಸಾಗುವವರಗೆ ಜೊತೆ ಇರುವೆ,ಪ್ರೀತಿಯಿಂದ ಸವಿ ದಿನ ನಿನ್ನಲಿ ಕಥೆಯ ಹೇಳುವೆ.ನಿತ್ಯ ನೋಡಲು ಬರುವೆ ಎದುರಿಗೆ,ನನ್ನ ಆಸೆಗೆ ಎಲೆ ಚಿಗುರುದು ತರುವಿಗೆ.||
ಕಣ್ಣ ರೆಪ್ಪೆಯ ಬಡಿಯುತ ಚಿಟ್ಟೆಗಳು ಮಾತನಾಡಿತು,ನೂರಾರು ಬಾರಿ ಕಣ್ಣ ಹೊಡೆದು ನಗೆಯ ಬೀರಿತು.ಎದೆತುಂಬಿ ಸಂತಸ ಪಡಲು ಸಿಕ್ಕಿರುವ ಅವಕಾಶ,ಈ ಚೆಂದವಾ ಕಣ್ತೆರೆದು ನೋಡೋ ನೀಲಿನೀಲಿ ಆಕಾಶ.||
ಬಂಡೆಯ ಮೇಲೆ ನಿಂತಿರುವೆ ಮೆಲ್ಲಗೆ,ನನ್ನ ಜೀವ ಭಾರವಾಗಿದೆ ಕಲ್ಲಿಗೆ.ಸಿಹಿಯಾದ ಕ್ಷಮೆ ಹೇಳುವೆ ನಿನ್ನಲ್ಲಿ,ಈ ಚೆಂದಕೆ ಬಿಳಿ ಮೋಡವು ಬಾನಲಿ.||
ಮೋಡದ ಪಯಣ ಯಾವ ಕಡೆಗೊ,ಲಾಲಿತ್ಯದಲಿ ಅಂಬರ ಸುತ್ತುವೆ ಎಂದಿಗೂ.ಎಲೆಗಳೆಲ್ಲಾ ಚಿಗುರಿದಾಗ ಮರದಲಿ ನೆರಳು,ನೇಸರ ಬೆಳಕಿಗೆ ಹೊಳೆಯುದು ರತ್ನದ ಹರಳು.||
✍? ಪುಷ್ಪಹಾಸ ಬಸ್ತಿಕರ, ಗೋಕರ್ಣ.*
Leave a Comment