
ಕೇರಳ :- ಕೇರಳದ ಕಾಸರಗೋಡು ಜಿಲ್ಲೆಯ ಬೇಲೂರು ನಿವಾಸಿಯಾಗಿರುವ ಈ ಆಟೋ ಚಾಲಕ, ಹಲಸಿನ ಹಣ್ಣು ಕುಯ್ಯಲು ಹೋಗಿ ಕೊರೊನಾ ಪಾಸಿಟಿವ್ ಆಗಿದ್ದಾನೆ.
ಹೌದು ಇದೇನಿದು ಎಂದಿರಾ ಕೇರಳದಲ್ಲೊಬ್ಬ ಆಟೋ_ಚಾಲಕನಿಗೆ#ಕೊರೊನಾ_ಪಾಸಿಟಿವ್ ಬಂದಿದೆ. ಆದ್ರೆ ಆತನಿಗೆ ಕೊರೊನಾ ಸೋಂಕು ತಗುಲಿರುವುದು ಹೇಗೆ ಪತ್ತೆಯಾಯ್ತು ಅನ್ನೋದೆ ಈ ಸುದ್ದಿಯ ವಿಶೇಷ.
ಹಣ್ಣು ಕೊಯ್ಯುವಾಗ ಅಚಾನಕ್ ಆಗಿ ಹಲಸಿನ ಹಣ್ಣೊಂದು ಆತನ ತಲೆ ಮೇಲೆ ಬಿದ್ದಿದ್ದು, ಆತನ ಬೆನ್ನುಮೂಳೆಗೆ ಪೆಟ್ಟಾಗಿದೆ. ಜೊತೆಗೆ ಕೈ ಮತ್ತು ಕಾಲಿಗೂ ಗಾಯ ಆಗಿದೆ. ತುಂಬಾ ಸೀರಿಯಸ್ ಅನ್ನುವಂತಹ ಸ್ಥಿತಿಯಲ್ಲಿದ್ದವನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕ್ಕದೊಂದು ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತೆ ಅಂತ ವೈದ್ಯರು ಹೇಳಿದ್ದಾರೆ.

ಇಲ್ಲೇ ಹಲಸಿನ ಹಣ್ಣು ಬಿದ್ದು ಆಸ್ಪತ್ರೆಗೆ ಸೇರಿದ್ದ ವ್ಯಕ್ತಿಗೆ ಕೊರೊನಾ ಕೂಡ ಇದೆ ಅಂತ ಗೊತ್ತಾದದ್ದು. ಕೊರೊನಾ ಸಮಸ್ಯೆ ಶುರುವಾದ ನಂತರ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೊರೊನಾ ಟೆಸ್ಟ್ ಮಾಡಿಸೋದು ಕಡ್ಡಾಯವಾಗಿದೆ. ಹೀಗಾಗಿ ಈತನಿಗೂ ಕೊರೊನಾ ಟೆಸ್ಟ್ ಮಾಡಿದ್ದಾರೆ. ವರದಿ ಬಂದ ಮೇಲೆ ಇಡೀ ಆಸ್ಪತ್ರೆಯೆ ಬೆಚ್ಚಿ ಬಿದ್ದಿದೆ. ಹೌದು ಈ ಆಟೋ ಚಾಲಕನಿಗೆ ಕೊರೊನಾ ಪಾಸಿಟಿವ್ ಅಂತ ವರದಿ ಬಂದಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ.ಕೆ. ಸುದೀಪ್, ಆಪರೇಶನ್ಗೆ ಒಳಗಾಗುವ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಬೇಕೆಂಬ ನಿಯಮದಂತೆ ಟೆಸ್ಟ್ ಮಾಡಿದಾಗ ಈತನಿಗೆ ಕೊರೊನಾ ಇರುವುದು ದೃಢ ಪಟ್ಟಿದೆ.
ಆದರೆ ಆತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಅಥವಾ ಕೊರೊನಾ ಸೋಂಕಿತರ ಸಂಪರ್ಕವಾಗಲಿ ಇಲ್ಲ. ಆತನ ರಿಕ್ಷಾದಲ್ಲಿ ಪ್ರಯಾಣಿಸಿದವರಿಂದ ಈತನಿಗೆ ಸೋಂಕು ತಗುಲಿರಬಹುದು ಅಥವಾ ಈತ ಒಮ್ಮೆ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟಿದ್ದನಂತೆ. ಈ ಸಂದರ್ಭದಲ್ಲೂ ಹರಡಿರಬಹುದು ಎಂಬ ಅನುಮಾನ ಇದೆ ಅಂತ ಹೇಳಿದ್ದಾರೆ.
Leave a Comment