
ದಾಂಡೇಲಿ: ಲಾಕ್ ಡೌನ್ ಸಡಿಲಿಕೆ ಬಳಿಕ ಕಳೆದ 15 ದಿನಗಳಿಂದ ನಗರದ ಬಹುತೇಕ ಕಡೆಗಳಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿ_ಆರಂಭವಾಗಿದೆ. ಮನಸ್ಸಿಗೆ ಬಂದಂತೆ ದಿನಕ್ಕೊಂದು ರಸ್ತೆಯನ್ನು ಅಗೆದು ಅದನ್ನು ಅರ್ಧಕ್ಕೆ ಬಿಟ್ಟು ಮರುದಿನ ಮತ್ತೊಂದು ರಸ್ತೆ ಅಗೆಯಲಾಗುತ್ತಿರುವುದರಿಂದ ಅಗೆಯಲಾದ ಗುಂಡಿಗಳಲ್ಲಿ_ಮಳೆ_ನೀರು ಮತ್ತು ತ್ಯಾಜ್ಯ_ನೀರು ನಿಂತುಕೊಳ್ಳುವುದರಿಂದ ಇದೀಗ ನಗರಕ್ಕೆ ಮಹಾಮಾರಿ ಸಾಂಕ್ರಾಮಿಕ_ರೋಗಗಳು_ಹರಡುವ ಭೀತಿ_ಎದುರಾಗಿದೆ.
ಈಗಾಗಲೆ ಕೊವಿಡ್-19 ನಿಂದ ಬಸವಳಿದಿರುವ ನಗರದ ಜನತೆಗೆ ಇದೀಗ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿರುವುದು ಮಾತ್ರ ಸುಳ್ಳಲ್ಲ.

ಇನ್ನೂ ಬಹುತೇಕ ಕಡೆ ಅಗೆದು ಪೈಪಲೈನ್ ಆಳವಡಿಸಿದ ಮೇಲೆ ಆ ಗುಂಡಿಯನ್ನು ಮುಚ್ಚಲಾಗಿದೆಯಾದರೂ ಅದು ಸಮರ್ಪಕವಾಗಿ ಮುಚ್ಚಿರುವುದಿಲ್ಲ.
ಅಗೆದ ಮಣ್ಣಿನ ರಾಶಿ ರಸ್ತೆಯ ಅಕ್ಕಪಕ್ಕದಲ್ಲಿ ಹಾಗೆಯೆ ಇರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೇ ಒಂದೆ ಕಡೆ ನಿಲ್ಲುವಂತಾಗಿದೆ.
ಸ್ಥಳೀಯ ಮಾರುತಿ_ನಗರದಲ್ಲಿ ಯುಜಿಡಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಅಲ್ಲಿ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ನಿಲ್ಲುವಂತಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಲಕ್ಷಣಗಳು ಕಂಡು ಬರುತ್ತಿದ್ದು, ಸ್ಥಳೀಯರಲ್ಲಿ ಭೀತಿಯುಂಟಾಗಿದೆ.
ಈ ಬಗ್ಗೆ ಸಂಬಂಧಿಸಿದ ಇಲಾಖೆ ಈಗಲೆ ಎಚ್ಚೆತ್ತು ಯುಜಿಡಿ ಕಾಮಗಾರಿಯನ್ನು ನಡೆಸುತ್ತಿರುವ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಂಡು ಸರಿಯಾಗಿ ಕೆಲಸ ಮಾಡಿಸಿಕೊಳ್ಳಬೇಕು ಹಾಗೂ ಜನರಿಗೆ ಆಗುತ್ತಿರುವ ಅನಾನೂಕೂಲತೆ, ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲದಿದ್ದರೇ ಗುತ್ತಿಗೇದಾರನನ್ನು ಆತನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬುದು ಜನರ ಆಗ್ರಹವಾಗಿದೆ.

Leave a Comment