
ಖಾನಾಪುರ: ಲಾಕಡೌನ ನಂತರ ರೇಲ್ವೆ ಸಂಚಾರ ಪುನಃ ಪ್ರಾರಂಭವಾದ ಕೂಡಲೇ ಗುಂಜಿ ಸಮೀಪದಲ್ಲಿ ಎರಡು ಕಾಡುಕೋಣಗಳನ್ನು ರೈಲು ಬಲಿ ಪಡೆದಿದೆ. ರೈಲ್ವೆ ಅಪ್ಪಳಿಸಿ ಕಾಡುಕೊಣಗಳು ಸಾವಿಗಿಡಾದ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಗುಂಜಿ-ಲೋಂಡಾ ಮಾರ್ಗದಲ್ಲಿನ ಕುಮ್ಮತವಾಡಿಯಲ್ಲಿ ಜರುಗಿದೆ. ಒಂದೇ ಸಮಯದಲ್ಲಿ ಎರಡು ಕಾಡುಕೋಣಗಳು ದುರ್ಮರಣಗೊಂಡಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿದ್ದು ಹೀಗೆ ಮಧ್ಯೆ ರಾತ್ರಿಯಲ್ಲಿಯ ಸಮಯದಲ್ಲಿ ರೇಲ್ವೆ ಅಪ್ಪಳಿಸಿದ್ದು, ಇದರಲ್ಲಿ ಒಂದು ಹೆಣ್ಣು, ಒಂದು ಗಂಡು ಇದು.ಅಂದಾಜು ಐದರಿಂದ ಆರು ವರ್ಷಗಳ ವಯಸ್ಸಿನ ಈ ಕಾಡುಕೋಣಗಳಾಗಿವೆ.
ಈ ಘಟನೆ ತಿಳಿಯುತ್ತಿದ್ದಂತೆಯೇ ಲೋಂಡಾ ಅರಣ್ಯ ಇಲಾಖೆಯ ವನ್ಯ ಅರಣ್ಯಾಧಿಕಾರಿ ಪ್ರಶಾಂತ್ ಗೌರಾಣಿ, ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಗಂಭೀರ ಘಟನೆಯ ಮಾಹಿತಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನೀಡಲಾಯಿತು.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ವಿಭಾಗಿಯ ಅರಣ್ಯ ಸಂರಕ್ಷಣಾಧಿಕಾರಿ ಕರುಣಾಕರ್, ಜಿಲ್ಲಾ ಅರಣ್ಯಾಧಿಕಾರಿ ಅಮರನಾಥ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕಾಡುಕೋಣ ಪಂಚನಾಮೆ ಮಾಡಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು.
Leave a Comment