
ಹಳಿಯಾಳ:- ಹಳಿಯಾಳ-ದಾಂಡೇಲಿ-ಜೋಯಿಡಾ ಮೂರು ತಾಲೂಕುಗಳನ್ನೊಳಗೊಂಡಿರುವ ಹಳಿಯಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ(ಎಪಿಎಮ್ಸಿ)ಯ ಆಡಳಿತ ಮಂಡಳಿಯ ಮೂರನೇ ಹಾಗೂ ಕೊನೆಯ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೇಯ ಚುನಾವಣೆ ಜೂ.24 ಬುಧವಾರದಂದು ನಡೆಯಲಿದ್ದು ಬೀಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ತೀವೃ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
5 ವರ್ಷದ ಅಧಿಕಾರವನ್ನು 20 ತಿಂಗಳಂತೆ ಮೂರು ಅವಧಿಗೆ ಹಂಚಿಕೆ ಮಾಡಲಾಗುವ ಕಾರಣ. ಸದ್ಯ 2 ಅವಧಿ ಅಂದರೇ 40 ತಿಂಗಳು ಅಧಿಕಾರದಲ್ಲಿದ್ದ ಹಾಲಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ ಹಾಗೂ ಉಪಾಧ್ಯಕ್ಷ ಜೋಯಿಡಾದ ರತ್ನಾಕರ ದೇಸಾಯಿ ಅವರ ಅಧಿಕಾರಾವಧಿಯು ಜು.26ಕ್ಕೆ ಕೊನೆಗೊಳ್ಳಲಿದೆ.
ಹಳಿಯಾಳದ ಎಪಿಎಮ್ಸಿಯಲ್ಲಿ ಕಾಂಗ್ರೇಸ್ ಬೆಂಬಲಿತರ ಸಂಖ್ಯೆ 8 ಹಾಗೂ ಬಿಜೆಪಿ ಬೆಂಬಲಿತರ ಸಂಖ್ಯೆ 5 ಇದೆ. ಆದರೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಬಿಜೆಪಿ ಬೆಂಬಲಿತ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದರಿಂದ ಬಿಜೆಪಿಯ ಸದಸ್ಯರ ಸಂಖ್ಯಾಬಲ 8ಕ್ಕೆ ಏರಿಕೆಯಾಗಿದೆ.
ಇದರಿಂದ ಹಳಿಯಾಳ ಎಪಿಎಮ್ಸಿಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ಸದಸ್ಯ ಬಲ ಸಮವಾಗಿದ್ದರಿಂದ ಎಪಿಎಮ್ಸಿ ಅಧ್ಯಕ್ಷ ಗಾದಿಯ ಚುನಾವಣೆಗೆ ತೀವೃ ಪೈಪೋಟಿ ನಡೆಸಲಾಗುತ್ತಿದೆ. ಅಲ್ಲದೇ ಈ ಮಧ್ಯೆ ಕಾಂಗ್ರೇಸ್ ಬೆಂಬಲಿತ ಓರ್ವ ರಾಮನಗರದ ಸದಸ್ಯ ಹಾಗೂ ಹಳಿಯಾಳದ ಓರ್ವ ಬಿಜೆಪಿ ಬೆಂಬಲಿತ ಸದಸ್ಯ ಅಪಹರಣವಾಗಿದ್ದರಿಂದ ಚುಣಾವಣೆಯ ತೀವೃತೆ ಹೆಚ್ಚಾಗಿದೆ.
ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು ಜಿದ್ದಾಜಿದ್ದಿನಿಂದ ಕೂಡಿರುವ ಕಾರಣ ಬುಧವಾರ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣಾಧಿಕಾರಿಗಳು ಬಿಗಿ ಪೋಲಿಸ್ ಬಂದೋಬಸ್ತ್ ನಿಯೋಜಿಸಿದ್ದು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.
ಅಲ್ಲದೇ ಈಗಾಗಲೇ ಜಿಲ್ಲಾಧಿಕಾರಿಗಳು ಹಳಿಯಾಳ ಎಪಿಎಮ್ಸಿಯ ಸದಸ್ಯರು ಸಮಬಲವಾಗಿರುವುದರಿಂದ ತೀವೃ ತುರುಸಿನ ಚುನಾವಣೆ ನಡೆಯುವ ಮಾಹಿತಿ ಇರುವ ಕಾರಣ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಎಪಿಎಮ್ಸಿ ಸುತ್ತಲ 500 ಮೀಟರ್ ಪ್ರದೇಶದಲ್ಲಿ 144 ಕಲಂ ನಿಷೇಧಾಜ್ಞೆ ಜಾರಿಗೊಳಿಸುವಂತೆ ಸೂಚಿಸಿರುವ ಕಾರಣ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಸಿದ್ದಾರೆ.
Leave a Comment