ಹಳಿಯಾಳ:- ಕಳೆದ ದಿ.15ರಂದು ಮಹಾರಾಷ್ಟ್ರದಿಂದ ಹಳಿಯಾಳಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಹಳಿಯಾಳದ ಕಳಸಾಪುರ ಗ್ರಾಮದನು ಎನ್ನಲಾದ 31 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಇರುವುದನ್ನು ಆರೋಗ್ಯ ಇಲಾಖೆ ಮಂಗಳವಾರ ದೃಢಪಡಿಸಿದೆ ಈ ಮೂಲಕ ಹಳಿಯಾಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಕಳೆದ 9 ದಿನಗಳಿಂದ ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ ವ್ಯಕ್ತಿಯು ಸೇರಿದಂತೆ 26 ಜನರ ಕೊವಿಡ್-19 ಪರೀಕ್ಷಾ ವರದಿಗಳು ಮಂಗಳವಾರ ಬಂದಿದ್ದು ಅದರಲ್ಲಿ ಕಳಸಾಪುರದವನು ಎನ್ನಲಾದ ವ್ಯಕ್ತಿಗೆ ಸೊಂಕು ತಗುಲಿರುವುದನ್ನು ಖಚಿತಪಡಿಸಲಾಗಿದ್ದು ಈತ ಈಗ ಜಿಲ್ಲೆಯ ರೋಗಿ ಸಂಖ್ಯೆ 147 ಹಾಗೂ ರಾಜ್ಯದಲ್ಲಿ ಪಿ-9415 ಆಗಿದ್ದಾನೆ.
ಸದ್ಯ ಆತನೊಂದಿಗೆ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಅಲ್ಲಿರುವ 12ಕ್ಕೂ ಹೆಚ್ಚು ಜನರನ್ನು ಮತ್ತೇ ಕ್ವಾರಂಟೈನ್ಗೆ ಒಳಪಡಿಸಿದ್ದು ಮತ್ತೊಮ್ಮೆ ಅವರ ಗಂಟಲು ದ್ರವ, ರಕ್ತದ ಮಾದರಿಯನ್ನು ಲ್ಯಾಬ್ಗೆ ಕಳಿಸಲಾಗುವುದುದೆಂದು ವೈದ್ಯರು ತಿಳಿಸಿದ್ದಾರೆ.
ಹಳಿಯಾಳದಲ್ಲಿ ಈ ಹಿಂದೆ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 7 ಇತ್ತು ಅವರಲ್ಲಿ ಮೂವರು ಗುಣಮುಖರಾಗಿ ಬಿಡುಗಡೆ ಹೊಂದಿದ್ದರು ಈಗ ಮತ್ತೇ ಒಂದು ಪ್ರಕರಣ ಪತ್ತೆಯಾಗಿರುವುದಿರಂದ ಸದ್ಯ ಹಳಿಯಾಳದಲ್ಲಿ 5 ಸಕ್ರಿಯ ಕೊರೊನಾ ಸೊಂಕಿತರು ಇದ್ದಾರೆ. ಇವರೆಲ್ಲರನ್ನು ಕಾರವಾರದ ಕೊವಿಡ್-ಕೇರ್ ಸೆಂಟರನಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿದೆ.
Leave a Comment