
ಹಳಿಯಾಳ :- ಮಹಾರಾಷ್ಟ್ರದಿಂದ ಹಿಂದಿರುಗಿ ಹಾಸ್ಟೇಲ್ ಒಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ 25_ವರ್ಷ_ವಯಸ್ಸಿನ ಇಬ್ಬರು_ಯುವತಿಯರಲ್ಲಿ ಕೊರೊನಾ ಸೊಂಕು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದ್ದು ಸಂಜೆಯ ಹೆಲ್ತ್ ಬುಲೆಟಿನ್ ಈ ಬಗ್ಗೆ ದೃಢಪಡಿಸಬೇಕಿದೆ.
ಕಳೆದ 5 ದಿನದ ಹಿಂದೆ ಮಹಾರಾಷ್ಟ್ರದಿಂದ ಹಿಂದಿರುಗಿದ್ದ ಈ ಇಬ್ಬರು ಯುವತಿಯರು ತಾಲೂಕಿನ ಬಾಳಶೆಟ್ಟಿಕೊಪ್ಪ_ಗ್ರಾಮದವರಾಗಿದ್ದಾರೆ ಎನ್ನಲಾಗಿದೆ.
ನಗರದ ಹಾಸ್ಟೇಲ್ ನಲ್ಲಿ 11 ಜನ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದು ಎಲ್ಲರ ಕೊವಿಡ್-19 ಪತ್ತೆ ಪರೀಕ್ಷಾ ವರದಿ ಇಂದು ಬಂದಿದ್ದು ಇವರಲ್ಲಿ ಇಬ್ಬರ ವರದಿ ಪೊಸಿಟಿವ್ ಬಂದಿದ್ದು ಉಳಿದವರದ್ದು ನೆಗೆಟಿವ್ ಬಂದಿದೆ ಎನ್ನಲಾಗಿದೆ.
ಸದ್ಯ ಈ ಇಬ್ಬರು ಯುವತಿಯರನ್ನು ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ಹಳಿಯಾಳ ತಾಲೂಕಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಈ ಬಗ್ಗೆ ಖಚಿತ ಪಡಬೇಕಿದೆ.
ಈ ಇಬ್ಬರು ಯುವತಿಯರು ಕ್ವಾರಂಟೈನ್ ಅಲ್ಲಿದ್ದಾಗಲೇ ಸೊಂಕು ಇರುವುದು ಪತ್ತೆಯಾಗಿದೆ ಎನ್ನಲಾಗಿರುವುದರಿಂದ ಸೊಂಕು ಹೊರಗೆ ಹರಡುವ ಭಿತಿ ಇಲ್ಲವಾಗಿದೆ. ಜನರು ಭಯಪಡದೆ, ಸುಳ್ಳು ವದಂತಿಗಳಿಗೆ ಕಿವಿ ಕೊಡಬಾರದು ಎಂದು ಅಧಿಕಾರಿಗಳು ವಿನಂತಿಸಿದ್ದಾರೆ
Leave a Comment