
ಹಳಿಯಾಳ :-
ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೊನಾ ಅಟ್ಟಹಾಸ ಹಳಿಯಾಳದಲ್ಲಿಯೂ ಮುಂದುವರೆದಿದ್ದು ಇಂದು ಮತ್ತೇ ಮುರ್ಕವಾಡ_ಗ್ರಾಮದ ನಾಲ್ಕೂ ವರ್ಷದ ಗಂಡು ಮಗುವಿನಲ್ಲಿ ಕೊರೊನಾ ನಂಜು ಇರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ.
ಮಹಾರಾಷ್ಟ್ರದ ಮಾಹಾನಂಜು ಕರ್ನಾಟಕಕ್ಕೆ ಬೆಂಬಿಡದೆ ಕಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೂ ಇದು ಹೊರತಾಗಿಲ್ಲ ಇತ್ತೀಚೆಗೆ ಮಹಾರಾಷ್ಟ್ರ ದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಆಗಿ ಮನೆಗೆ ಹಿಂದಿರುಗಿದ್ದ 35 ವರ್ಷದ ವ್ಯಕ್ತಿಯಲ್ಲಿ ಸೊಂಕು ಇರುವುದು ಪತ್ತೆಯಾಗಿತ್ತು ಈಗ ಆತನ ಸಂಪರ್ಕದಲ್ಲಿದ್ದ ಆತನ 4 ವರ್ಷದ ಗಂಡು ಮಗುವಿನಲ್ಲಿ ಸೊಂಕು ದೃಢಪಟ್ಟಿದೆ. ಈಗ ಮಗು ರೋಗಿ ಸಂಖ್ಯೆ UK -168 ಮತ್ತು ರಾಜ್ಯದಲ್ಲಿ p-10647 ಆಗಿದೆ.
ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ರೋಗಿಯನ್ನು ಕಾರವಾರದ ಕೋವಿಡ್19 ಕೇರ್ ಸೆಂಟರಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

Leave a Comment