
ಹಳಿಯಾಳ :- ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಚೇರಿ, ವಿಧಾನ ಪರಿಷತ್
ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ಕಾರ್ಯಾಲಯ, ಹೊಟೆಲ್
ಲಕ್ಷ್ಮಣ ಪ್ಯಾಲೇಸ್ ಸಭಾಭವನದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ
ಡಿಕೆ ಶಿವಕುಮಾರ ಅವರ ಪ್ರತಿಜ್ಞಾವಿಧಿ-ಪದಗ್ರಹಣ
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಇಂದು ಬೆಂಗಳೂರಿನಲ್ಲಿ ನಡೆದ ಪದಗ್ರಹಣ
ಕಾರ್ಯಕ್ರಮದ ನೇರಪ್ರಸಾರ ಕಾರ್ಯಕ್ರಮದಲ್ಲಿ ತಾಲೂಕಿನ
ಎಲ್ಲ ಭಾಗದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸುವ
ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೆಕರ ಅವರು
ಇಲ್ಲಿನ ಲಕ್ಷ್ಮಣ ಪ್ಯಾಲೇಸ್ ಸಭಾಭವನದಲ್ಲಿ ಆಯೋಜಿಸಿದ್ದ
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ನೂತನ ಕೆಪಿಸಿಸಿ
ಸಾರಥಿಗೆ ಶುಭಾಶಯ ಕೊರಿದರು.
ಕಾರ್ಯಕ್ರಮದಲ್ಲಿ ಎ ಪಿ ಎಂ ಸಿ ನಿರ್ದೇಶಕ ಶ್ರೀನಿವಾಸ
ಘೋಟ್ನೆಕರ, ಆರ್ ಎಸ್ ಎಸ್ ಸೊಸಾಯಿಟಿ ಅಧ್ಯಕ್ಷ ಶಿವಪುತ್ರಪ್ಪ
ನುಚ್ಚಂಬ್ಲಿ, ವಕೀಲರಾದ ಎಲ್ ಎಸ್ ಅರಿಶಿಣಗೇರಿ, ಬಾಲಕೃಷ್ಣ
ಶಾಪೂರಕರ, ಯಶವಂತ ಪಟ್ಟೆಕರ ಇದ್ದರು.

ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ
ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಮೀಟಿ ಕಾರ್ಯಾಲಯದಲ್ಲಿ ಅಧ್ಯಕ್ಷ
ಸುಭಾಸ್ ಕೊರ್ವೆಕರ ಮತ್ತು ಯುವ ಕಾಂಗ್ರಸ್ ಅಧ್ಯಕ್ಷ
ರವಿ ಅಶೋಕ ತೋರಣಗಟ್ಟಿ ಯವರ ನೇತೃತ್ವದಲ್ಲಿ
ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಜ್ಯೋತಿ
ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಪ್ರತಿಜ್ಞಾ ವಿಧಿ
ಸ್ವೀಕಾರ ಕಾರ್ಯಕ್ರಮವನ್ನು ವೀಕ್ಷಿಸಿ ಶುಭಾಶಯ
ಕೊರಲಾಯಿತು.
ಕಾರ್ಯಕ್ರಮದಲ್ಲಿ ಬ್ಲಾಕ್ ಉಸ್ತುವಾರಿ ಶಿವಯೋಗಿ
ಹಿರೇಮಠ, ಮುಖಂಡರಾದ ಸತ್ಯಜಿತ್ ಗಿರಿ ಮೊದಲಾದವರು
ಇದ್ದರು.
Leave a Comment