
ಹೊನ್ನಾವರ: ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಪ್ರತಿ ಬ್ಯಾರಲ್‍ಗೆ ಕುಸಿತ ಕಂಡಿದ್ದರೂ, ಭಾರತದಲ್ಲಿ ಮಾತ್ರ ಕೇಂದ್ರ ಸರಕಾರ ದಿನದಿಂದ ದಿನಕ್ಕೆ ಪೆಟ್ರೊಲ್ ಮತ್ತು ಡಿಸೇಲ್ ಬೆಲೆ ಮನಸೆಚ್ಚೆ ಏರಿಸುತ್ತಿದೆ. ಈಗಾಗಲೇ ಕೊರೊನಾ ಸಂಕಷ್ಟದಿಂದ ಆರ್ಥಿಕವಾಗಿ ಬಳಲುತ್ತಿರುವ ಜನರ ಜೀವನ ದುಸ್ತರವಾಗಿದ್ದೂ, ತಕ್ಷಣ ಕೇಂದ್ರದ ಮೋದಿ ಸರಕಾರ ಪೆಟ್ರೊಲ್ ಮತ್ತು ಡಿಸೇಲ್ ದರವನ್ನು ತಕ್ಷಣ ಇಳಿಸುವಂತೆ ಆಗ್ರಹಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ ಸಮಿತಿ ನಾಳೆ ಶನಿವಾರ ಮುಂಜಾನೆ 11 ಗಂಟೆಗೆ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿ, ಹೊನ್ನಾವರ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ಪ್ರತಿಭಟನೆಗೆ ಸಾರ್ವಜನಿಕರು , ಪಕ್ಷದ ಕಾರ್ಯಕರ್ತರು, ಮುಖಂಡರು ಸಹಕರಿಸುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮನವಿ ಮಾಡಿದ್ದಾರೆ.
Leave a Comment