ಹಳಿಯಾಳ :- ಮಹಾರಾಷ್ಟ್ರದಿಂದ ತನ್ನ ಕುಟುಂಬದೊಂದಿಗೆ
ಹಿಂದಿರುಗಿ ಹಾಸ್ಟೇಲ್ನಲ್ಲಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ 2
ವರ್ಷದ ಹೆಣ್ಣು ಮಗುವಿಗೂ ಗುರುವಾರ ಕೊರೊನಾ
ಸೊಂಕು ದೃಢಪಟ್ಟಿದೆ. ಈ ಮೂಲಕ ಹಳಿಯಾಳ
ಸೊಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಕಳೆದ 13 ದಿನಗಳ ಹಿಂದೆ ಮಹಾರಾಷ್ಟ್ರದಿಂದ 10 ಜನರ
ಕುಟುಂಬ ಹಳಿಯಾಳಕ್ಕೆ ಆಗಮಿಸಿತ್ತು ಇವರು ತಾಲೂಕಿನ
ಬಾಳಶೆಟ್ಟಿಕೊಪ್ಪದವರು ಎನ್ನಲಾಗಿದ್ದು. ಪಟ್ಟಣದ
ಬಸವನಗರದ ಹಾಸ್ಟೇಲ್ನಲ್ಲಿ ಸಾಂಸ್ಥಿಕ ಕ್ವಾರಂಟೈನ್
ನಲ್ಲಿದ್ದರು. ಇವರಲ್ಲಿ ದಿ.25 ರಂದು 25 ವರ್ಷದ ಓರ್ವ
ಯುವತಿ ಜಿಲ್ಲೆಯ ರೋಗಿ ಸಂಖ್ಯೆ ಯುಕೆ 165 ರಾಜ್ಯದ
ರೋಗಿ ಸಂಖ್ಯೆ ಪಿ-10182 ಆಗಿದ್ದರೇ ಇನ್ನೊರ್ವ 23 ವರ್ಷದ
ಯುವತಿ ಯುಕೆ-166 ಹಾಗೂ ಪಿ-10183 ನಲ್ಲಿ ಸೊಂಕು
ದೃಢಪಟ್ಟಿತ್ತು.
ಹೀಗಾಗಿ ಉಳಿದವರನ್ನು ಮತ್ತೇ ಕ್ವಾರಂಟೈನ್ಗೆ
ಒಳಪಡಿಸಿ ಅವರ ಗಂಟಲು ದ್ರವ, ರಕ್ತದ ಮಾದರಿಯನ್ನು
ಸಂಗ್ರಹಿಸಿ ಲ್ಯಾಬ್ಗೆ ಕೊವಿಡ್-19 ಪತ್ತೇ ಪರೀಕ್ಷೆಗೆ
ಕಳುಹಿಸಲಾಗಿತ್ತು.
ಗುರುವಾರ ಬಂದಿರುವ ವರದಿಯಲ್ಲಿ 2 ವರ್ಷದ ಹೆಣ್ಣು
ಮಗುವಿನಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದು
ಜಿಲ್ಲೆಯ ರೋಗಿ ಸಂಖ್ಯೆ 280 ಆಗಿದ್ದಾಳೆ.
ಹಳಿಯಾಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 16ಕ್ಕೆ
ಏರಿಕೆಯಾಗಿದ್ದರೇ ಇವರಲ್ಲಿ 7 ಜನ ಗುಣಮುಖರಾಗಿ
ಬಿಡುಗಡೆಹೊಂದಿದ್ದು ಸಕ್ರಿಯ ಸೊಂಕಿತರ ಸಂಖ್ಯೆ 9ಕ್ಕೆ
ಇಳಿಕೆಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಸದ್ಯ
ಹಳಿಯಾಳದಲ್ಲಿ 22 ಜನ ಸಾಂಸ್ಥಿಕ ಕ್ವಾರಂಟೈನ್ಗೆ
ಒಳಪಟ್ಟಿದ್ದು ಇವರ ವರದಿಗಳು ಬರಬೇಕಿದೆ ಎಂದು
ವರದಿಯಾಗಿದೆ.
ಮಗುವನ್ನು ಸಂಪೂರ್ಣ ಸುರಕ್ಷಾ
ಕ್ರಮಗಳೊಂದಿಗೆ ಹಳಿಯಾಳ ತಾಲೂಕಾ ಆಸ್ಪತ್ರೆಯ
ವಿಶೇಷ ಚಿಕಿತ್ಸಾ ಘಟಕಕ್ಕೆ ಕರೆತಂದಿದ್ದು ಕಾರವಾರದ
ಕೊವಿಡ್ ಕೇರ್ ಸೆಂಟರಗೆ ರವಾನಿಸಲಾಗುವುದು
ಎಂದು
ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Leave a Comment