ಹಳಿಯಾಳ :- ಮಹಾರಾಷ್ಟ್ರದಿಂದ ವಾಪಸ್ಸಾಗಿ ಪಟ್ಟಣದ ಬಸವನಗರದ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಇಬ್ಬರು ಬಾಲಕಿಯರಿಗೆ ಕೊರೊನಾ_ಸೊಂಕು_ದೃಢಪಟ್ಟಿದೆ_ಎನ್ನಲಾಗಿದೆ.
ಕಳೆದ 15 ದಿನಗಳ ಹಿಂದೆ ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ತಾಲೂಕಿನ ಬಾಳಶೆಟ್ಟಿಕೊಪ್ಪದ ಎರಡು ಕುಟುಂಬದ 9 ಜನರಲ್ಲಿ ಈಗಾಗಲೇ ಇಬ್ಬರು ಯುವತಿಯರು ಸೇರಿ ಒಂದು ಮಗುವಿನಲ್ಲಿ ಹೀಗೆ ಮೂವರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದು ಅವರು ಕಾರವಾರದ ಕೊವಿಡ್-ಕೇರ್ ವಿಶೇಷ ಚಿಕಿತ್ಸಾ ಘಟಕದಲ್ಲಿ_ಚಿಕಿತ್ಸೆ_ಪಡೆಯುತ್ತಿದ್ದಾರೆ.
ಈಗ ಇವರ ಸಂಪರ್ಕದಲ್ಲಿಯೇ ಕ್ವಾರಂಟೈನ್ ನಲ್ಲಿದ್ದ 12 ವರ್ಷದ ಮತ್ತು 7 ವರ್ಷದ ಬಾಲಕಿಯರಲ್ಲಿ ಅದರೇ ಇಬ್ಬರಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದ್ದು ಹೆಲ್ತ್ ಬುಲೆಟಿನ್ ಈ ಬಗ್ಗೆ ಖಚಿತಪಡಿಸಲಿದೆ.
ಸದ್ಯ ಹಳಿಯಾಳದಲ್ಲಿ ಸೊಂಕಿತರ ಸಂಖ್ಯೆ 19 ಕ್ಕೆ ಏರಿಕೆಯಾಗಿದ್ದು ಇವರಲ್ಲಿ 10 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಾಲೂಕಾಡಳಿತ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಿದೆ.
Leave a Comment