
ಹಳಿಯಾಳ :- ಪಕ್ಕದ ಗೋವಾ_ರಾಜ್ಯದಿಂದ_ಕಳೆದ 14_ದಿನಗಳ_ಹಿಂದೆ_ಹಳಿಯಾಳಕ್ಕೆ ಬಂದಿದ್ದ 60 ವರ್ಷದ ವೃದ್ದೆಯ ಕೊವಿಡ್-19 ಪರೀಕ್ಷಾ ವರದಿ ಗುರುವಾರ ಬಂದಿದ್ದು ಅಜ್ಜಿಯಲ್ಲಿ ಕೋರೊನಾ ಸೊಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ತಾಲೂಕಿನ ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿರುವ ಕರ್ಲಕಟ್ಟಾ_ಗ್ರಾಮದ_ಲಕ್ಷ್ಮೀ_ಗಲ್ಲಿ ರಹವಾಸಿಯಾಗಿರುವ ವೃದ್ದೆ ಗೋವಾದಲ್ಲಿರುವ ತನ್ನ ಮಗನ_ಬಳಿ ಇದ್ದು ಕಳೆದ 14 ದಿನಗಳ ಹಿಂದೆ ಸ್ವಗ್ರಾಮಕ್ಕೆ ಆಗಮಿಸಿದಾಗ ವೃದ್ದೆಗೆ ಹೋಮ ಕ್ವಾರಂಟೈನ್ ಮಾಡಲಾಗಿತ್ತು.
ವೈದ್ಯರು ವೃದ್ದೆಯ ಗಂಟಲು ದ್ರವ, ರಕ್ತದ ಮಾದರಿಯನ್ನು ಸಂಗ್ರಹಿಸಿ ಕೊವಿಡ್-19 ಪತ್ತೇ ಪರೀಕ್ಷೆಗೆ ಕಳುಹಿಸಿದ್ದು ಗುರುವಾರ ವರದಿ ಬಂದಿದ್ದು, ಸೊಂಕು ಪತ್ತೆಯಾಗಿದೆ ಎನ್ನಲಾಗಿದೆ.
ಹಳಿಯಾಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಅಂಬ್ಯುಲೆನ್ಸ್ ಮೂಲಕ ವೃದ್ದೆಯನ್ನು ಕಾರವಾರದ ಕೊವಿಡ್ ಕೇರ್ ವಿಶೇಷ_ಚಿಕಿತ್ಸಾ_ಘಟಕಕ್ಕೆ ರವಾನಿಸಿದ್ದಾರೆ.
ಈಗ ಇವರ ಸಂಪರ್ಕಕ್ಕೆ_ಬಂದ_ಕುಟುಂಬದ ನಾಲ್ವರನ್ನು_ಸಾಂಸ್ಥಿಕ_ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಸದ್ಯ ವೃದ್ದೆ ವಾಸವಿದ್ದ ಲಕ್ಷ್ಮೀಗಲ್ಲಿಯನ್ನು_ಸೀಲ್ ಡೌನ್ ಮಾಡಲಾಗಿದೆ. ವೃದ್ದೆಯ ಮನೆಗೆ ರಾಸಾಯನಿಕ ಸಿಂಪಡಿಸಲಾಗಿದೆ ಎಂದು ಕೂಡ ಮಾಹಿತಿ ಲಭ್ಯವಾಗಿದೆ.
ಹಳಿಯಾಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 20 ಕ್ಕೆ ಏರಿಕೆಯಾಗಿದ್ದು ಹಂತ ಹಂತವಾಗಿ ಕೆಲವರು ಗುಣಮುಖರಾಗಿ ಆಗಮಿಸುತ್ತಿದ್ದಾರೆ.
Leave a Comment