ಹಳಿಯಾಳ :- ಕೋರೊನಾ ಮಹಾಮಾರಿ ವೈರಸ್ ಉಲ್ಬಣಗೊಳ್ಳುತ್ತಿರುವ ಕಾರಣ ಸಾರ್ವಜನೀಕರ ಜೀವ ರಕ್ಷಣೆ ಹಾಗೂ ವೈರಸ್ ನಿಯಂತ್ರಣಕ್ಕೆ ಹಳಿಯಾಳದ ಎಲ್ಲ_ವ್ಯಾಪಾರಸ್ಥರು, ಸಂಘ_ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಮಧ್ಯಾಹ್ನ 3 ಗಂಟೆಯ ಬಳಿಕ ಬಂದ್ (ಲಾಕ್ ಡೌನ್) ಮಾಡುವ_ತೀರ್ಮಾನ ತಾಲೂಕಾಡಳಿತ ಮುಂದೆ ಕೈಗೊಂಡಿದ್ದು ಇಂದಿನಿಂದಲೇ_ಇದು_ಜಾರಿಯಾಗಲಿದೆ.
ಗುರುವಾರ ಇಲ್ಲಿಯ ಮಿನಿ_ವಿಧಾನಸೌಧದ ತಹಶಿಲ್ದಾರ್ ಕಚೇರಿಯಲ್ಲಿ_ನಡೆದ_ಸಭೆಯಲ್ಲಿ ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗುಲೆ, ಸಿಪಿಐ ಲೋಕಾಪುರ ಬಿಎಸ್ ಅವರ ಎದುರು ತಮ್ಮ ಒಮ್ಮತದ ನಿರ್ಣಯವನ್ನು ತಿಳಿಸಿದ ವ್ಯಾಪಾರಸ್ಥರು ಹಾಗೂ ಸಂಘ ಸಂಸ್ಥೆಯವರು ಮಧ್ಯಾಹ್ನದ_ನಂತರದ_ಬಂದ್ ಮಾಡುವ ನಿರ್ಣಯಕ್ಕೆ ಅನುಮತಿ_ಕೊರಿದರು.
ಹಳಿಯಾಳ ವ್ಯಾಪಾರಸ್ಥರ ಒಕ್ಕೂಟ, ಕಿರಾಣಿ ವರ್ತಕರ ಸಂಘ,ಕರ್ನಾಟಕ ರಕ್ಷಣಾ ವೇದಿಕೆ ,ಮಂಜು ಡ್ಯಾನ್ಸ್&ಕರಾಟೆ ಸ್ಕೂಲ್,ಮದ್ಯ ವರ್ತಕರ ಸಂಘ,ಜಯ ಕರ್ನಾಟಕ ಸಂಘಟನೆ, ಹೊಟೆಲ್ ಮಾಲಿಕರ ಸಂಘ,ತರಕಾರಿ ಮಾರಾಟಗಾರರ ಸಂಘ ಹಾಗೂ ಇನ್ನಿತರೆ ಸಂಘಟನೆಗಳ ಉಪಸ್ಥಿತಿಯಲ್ಲಿ ಸ್ವಯಂ ಪ್ರೇರಿತವಾಗಿ 10-072020 ರಿಂದ25-07-2020 ರವರೆಗೆ ಮದ್ಯಾಹ್ನ 3ಘಂಟೆಯಿಂದ ಸಂಪೂರ್ಣ ಬಂದ ಮಾಡಲು ನಿರ್ದರಿಸಲಾಗಿದೆ.
ಇದಕ್ಕೆ ತಹಶಿಲ್ದಾರ್ ಅವರು ಸಮ್ಮತಿ ಸೂಚಿಸಿದ್ದು ಇದು ಸರ್ಕಾರದ ನಿರ್ಧಾರವಲ್ಲ ಆದರೇ ಈ ಸಂದರ್ಭದಲ್ಲಿ ತಮ್ಮ ನಿರ್ಣಯ ಸಮಯೋಚಿತ ಹಾಗೂ ಅವಶ್ಯಕ ಇರುವುದರಿಂದ ಎಲ್ಲರೂ ಇದನ್ನು ಪಾಲಿಸಬೇಕು ಮುಂದೆ ರೋಗದ ಸ್ಥಿತಿ ನೋಡಿ ಮುಂದಿನ ನಿರ್ಣಯ ಕೈಗೊಳ್ಳೊಣ ಎಂದು ತಿಳಿಸಿದರು.
For news and adds :- 9481201279
Leave a Comment