
ಉತ್ತರ_ಕನ್ನಡ( ಕಾರವಾರ): ಕಾರವಾರದ ಕಿಮ್ಸ್ ಅಧೀನ ಆಸ್ಪತ್ರೆಯಲ್ಲಿ_ಅನಾರೋಗ್ಯದಿಂದ_ಚಿಕಿತ್ಸೆ ಪಡೆಯುತ್ತಿದ್ದ_ಯುವಕ_ಶನಿವಾರ ಮೃತಪಟ್ಟಿದ್ದು ಆತ ಕೊರೊನಾ ಪಾಸಿಟಿವ್ ಆಗಿದ್ದ ಎಂಬುದು ದೃಢಪಟ್ಟಿದೆ.
ಕಾರವಾರ_ಮೂಲದ_35_ವರ್ಷದ_ಯುವಕ ಬ್ರೈನ್ ಟ್ಯೂಮರ್ ಸೇರಿದಂತೆ ,ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಮಂಗಳೂರು ಟ್ರಾವೆಲ್ ಹಿಸ್ಟರಿಯಿದ್ದ ಇತ ಐಸಿಯುನಲ್ಲಿ ದಾಖಲಾಗಿದ್ದು, ಅದೇ ಐಸಿಯು ವಾರ್ಡನಲ್ಲಿ 71 ವರ್ಷದ ವೃದ್ಧೆಗೆ ಕೊವಿಡ್ ತಗುಲಿದ್ದು ಆಕೆ ಸಹ ಮೃತಪಟ್ಟಿದ್ದಳು ಎಂಬುದನ್ನು ಇಲ್ಲಿ ಮರೆಯೋ ಹಾಗಿಲ್ಲ.
ಅನಾರೋಗ್ಯದಿಂದ ಮೃತಪಟ್ಟ ಯುವಕನ ಗಂಟಲು ದ್ರವ ಪರೀಕ್ಷೆ ನಡೆಸಿದ್ದು ಆತನಲ್ಲೂ ಕೊವಿಡ್ ಇದ್ದದ್ದು ದೃಢಪಟ್ಟಿದೆ. ಐಸಿಯುನಲ್ಲಿದ್ದ ವೃದ್ಧೆಯಿಂದಲೇ ಆತನಿಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದ್ದು ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರವನ್ನ ಜಿಲ್ಲಾಡಳಿತ ಮಾಡಿದೆ ಎನ್ನಲಾಗಿದೆ.
Leave a Comment