
ಹಳಿಯಾಳ:- ಧಾರವಾಡಕ್ಕೆ ಚಿಕಿತ್ಸೆಗೆಂದು ತೆರಳಿದ್ದ ಹಳಿಯಾಳ ತಾಲೂಕಿನ ಹುಣಸವಾಡ ಗ್ರಾಮದ ೩೫ ವರ್ಷದ ಮಹಿಳೆಯಲ್ಲಿ ಕೊರೊನಾ ಸೊಂಕು ದೃಢಪಟ್ಟಿರುವುದನ್ನು ಧಾರವಾಡದ ಹೆಲ್ತ್ ಬುಲೆಟಿನ್ನಲ್ಲಿ ದೃಢಪಡಿಸಲಾಗಿದೆ.
ಶನಿವಾರ ಧಾರವಾಡದ ಜಿಲ್ಲಾಡಳಿತದಿಂದ ಬಂದ ಮಾಹಿತಿ ಮೆರೆಗೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ನೇತೃತ್ವದಲ್ಲಿ ತಾಲೂಕಾಧಿಕಾರಿಗಳು ಹುಣಸವಾಡ ಗ್ರಾಮಕ್ಕೆ ತೆರಳಿ ಸಂಪೂರ್ಣ ಸುರಕ್ಷಾ ಕ್ರಮಗಳೊಂದಿಗೆ ಸೊಂಕಿತ ಮಹಿಳೆಯನ್ನು ಹಳಿಯಾಳ ತಾಲೂಕಾ ಆಸ್ಪತ್ರೆಯ ಕೊವಿಡ್-ಕೇರ್ ಸೆಂಟರಗೆ ದಾಖಲಿಸಿದ್ದಾರೆ.
ಎಲ್ಲಿಯೂ ಹೊರ ರಾಜ್ಯಕ್ಕೆ ಹೊಗಿ ಬಂದಿರುವ ಬಗ್ಗೆ ಅಥವಾ ಸೊಂಕಿತರ ಸಂಪರ್ಕದಲ್ಲಿರುವ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಈ ಮಹಿಳೆಗೆ ಕೊರೊನಾ ಸೊಂಕು ಎಲ್ಲಿಂದ ತಗುಲಿದೆ ಎಂಬುದೇ ತಾಲೂಕಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ಕುರಿತು ಮಾಹಿತಿ ನೀಡಿರುವ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಈ ಮಹಿಳೆಗೆ ಆರೋಗ್ಯದ ಸಮಸ್ಯೆಯಿಂದ ಧಾರವಾಡದ ಜಿಲ್ಲಾಸ್ಪತ್ರೆ(ಸಿವಿಲ್)ಗೆ ಒಂದೆರಡು ಬಾರಿ ತೆರಳಿ ಚಿಕಿತ್ಸೆ ಪಡೆದಿದ್ದು ಬಳಿಕ ಮಹಿಳೆಗೆ ಶಸ್ತçಚಿಕಿತ್ಸೆಗೆ ವೈದ್ಯರು ಸೂಚಿಸಿದ್ದರಂತೆ. ಕಾರಣ ಶಸ್ತçಚಿಕಿತ್ಸೆಗೂ ಮುನ್ನ ಮಹಿಳೆಯ ಗಂಟಲು ದ್ರವ, ರಕ್ತದ ಮಾದರಿ ಸಂಗ್ರಹಿಸಿ ಕೊವಿಡ್-೧೯ ಪತ್ತೆ ಪರೀಕ್ಷಾ ವರದಿಗಾಗಿ ಕಳುಹಿಸಲಾಗಿತ್ತು. ಶನಿವಾರ ಈ ವರದಿ ಬಂದಿದ್ದು ಮಹಿಳೆಗೆ ಕೊವಿಡ್ ತಗುಲಿರುವುದು ದೃಢಪಟ್ಟಿದೆ. ಇದನ್ನು ಸಾರಿ ಪ್ರಕರಣ ಎಂದು ಪರಿಗಣಿಸಲಾಗಿದೆ. ಅಲ್ಲದೇ ಮಹಿಳೆಯನ್ನು ಹಳಿಯಾಳ ಆಸ್ಪತ್ರೆಯ ಕೊವಿಡ್-ಕೆರ್ ಸೆಂಟರ್ಗೆ ಚಿಕಿತ್ಸೆಗೆ ದಾಖಲಿಸಿಕೊಳ್ಳಲಾಗಿದೆ.

ಹುಣಸವಾಡ ಗ್ರಾಮದ ಮಹಿಳೆ ವಾಸವಿದ್ದ ಹರಿಜನ ಓಣಿಯ ೧೦೦ ಮೀಟರ್ ಸೀಲ್ಡೌನ್ ಮಾಡಲಾಗಿದ್ದು ೨೦೦ ಮೀಟರ್ ಬಪ್ಪರ್ಝೋನ್ ಎಂದು ಗುರುತಿಸಲಾಗಿದೆ. ಅಲ್ಲದೇ ಈಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಕುಟುಂಬದ ೫ ಜನರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಹಾಗೂ ದ್ವಿತಿಯ ಸಂಪರ್ಕಕ್ಕೆ ಬಂದಿರುವ ಜನರನ್ನು ಹೋಮ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.
ಆದರೇ ಸೊಂಕಿತ ಮಹಿಳೆ ಗಂಡನೊoದಿಗೆ ಹಳಿಯಾಳಕ್ಕೆ ಎರಡು ಬಾರಿ ಬಂದು ಹೋಗಿರುವ ಹಾಗೂ ಗ್ರಾಮದಲ್ಲೂ ಕೆಲವೆಡೆ ಸುತ್ತಾಡಿದ್ದಾಳೆ ಎನ್ನಲಾಗಿದೆ. ಈವರೆಗೆ ತಾಲೂಕಿನಲ್ಲಿ ಹೊರ ರಾಜ್ಯ ಹಾಗೂ ದೇಶದಿಂದ ಬಂದವರಲ್ಲಿ ಸೊಂಕು ಪತ್ತೆಯಾಗಿತ್ತು. ಆದರೇ ಈಗ ಗ್ರಾಮದಲ್ಲೇ ಇದ್ದು ಧಾರವಾಡಕ್ಕೆ ಚಿಕಿತ್ಸೆಗೆ ಹೋಗಿ ಬಂದು ಸೊಂಕು ದೃಢಪಟ್ಟಿರುವುದು ತಾಲೂಕಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದರೇ ಜನತೆ ಸಾಕಷ್ಟು ಭಯಭೀತರಾಗಿದ್ದಾರೆ. ಗ್ರಾಮದ ಜನತೆ ಮಾತ್ರ ಸಾಕಷ್ಟು ಆತಂಕಕ್ಕೆ ಒಳಗಾಗಿರುವುದು ಕಂಡು ಬಂದಿತು.
ಸದ್ಯ ಹಳಿಯಾಳದ ೨೦ ಕೊರೊನಾ ಸೊಂಕಿತರಲ್ಲಿ ೧೦ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ೧೦ ಸಕ್ರೀಯ ಸೊಂಕಿತರು ಇದ್ದು ಇಂದು ಮತ್ತೊಂದು ಪ್ರಕರಣ ದೃಢಪಟ್ಟಿರುವುದರಿಂದ ಸೊಂಕಿತರ ಸಂಖ್ಯೆ ೨೧ಕ್ಕೆ ಏರಿಕೆಯಾಗಿದ್ದರೇ ಸಕ್ರೀಯ ಸೊಂಕಿತರ ಸಂಖ್ಯೆ ೧೧ ಆಗಿದೆ. ಅಲ್ಲದೇ ಹಳಿಯಾಳದಲ್ಲಿ ೩೩ ಜನ ಸಾಂಸ್ಥಿಕ ಕ್ವಾರಂಟೈನಲ್ಲಿದ್ದು ಕೊವಿಡ್ ಪರೀಕ್ಷಾ ವರದಿಗಳು ಬಂದAತೆ ನೆಗೆಟಿವ್ ಬಂದವರನ್ನು ಬಿಡುಗಡೆಗೊಳಿಸಲಾಗುತ್ತಿದೆ.
Leave a Comment