ಹಳಿಯಾಳ:- ಸ್ವಯಂಪ್ರೇರಿತವಾಗ ಮಾರುಕಟ್ಟೆ, ವ್ಯಾಪಾರ-ವಹಿವಾಟು ಬಂದ್ ಮಾಡಲು ನಿರ್ಧರಿಸಿದ್ದ ಹಳಿಯಾಳದ ವಿವಿಧ ಸಂಘಟನೆ ಹಾಗೂ ವ್ಯಾಪಾರಸ್ಥರಲ್ಲಿ ಸದ್ಯ ಕೆಲವರಲ್ಲಿ ಅಸಮಾಧಾನ ಹಾಗೂ ಅಪಸ್ವರದ ಮಾತುಗಳು ಕೇಳಿಬರುತ್ತಿವೆ.
ಕೊರೊನಾ ಮಹಾಮಾರಿ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಕಟ್ಟಿಹಾಕಲು ಮತ್ತು ಸಾರ್ವಜನೀಕ ಜೀವ ರಕ್ಷಣೆ ಹಿತದೃಷ್ಟೀಯಿಂದ ದಿ.೧೦ ರಿಂದ ಮಧ್ಯಾಹ್ನ ೩ ಗಂಟೆಯಿ0ದ ಸ್ವಯಂಪ್ರೇರಿತವಾಗ ಬಂದ್ ಮಾಡಲು ನಿರ್ಧರಿಸಿದ್ದ ಹಲವಾರು ಸಂಘಟನೆ ಹಾಗೂ ಎಲ್ಲ ವ್ಯಾಪಾರಸ್ಥರು ತಾಲೂಕಾಡಳಿತ ಮುಂದೆ ಈ ಬಗ್ಗೆ ನಿರ್ಧಾರವನ್ನು ಪ್ರಕಟಿಸಿ ತಾಲೂಕಾಡಳಿತದಿಂದ ಒಪ್ಪಿಗೆ ಪಡೆದಿದ್ದರು.

ಅದರಂತೆ ದಿ.೧೦ ಶುಕ್ರವಾರದಿಂದ ಮಧ್ಯಾಹ್ನ ೩ ಗಂಟೆಯಿ0ದ ಸ್ವಯಂಪ್ರೇರಿತ ಲಾಕ್ಡೌನ್ ಆರಂಭಿಸಲಾಗಿತ್ತು. ಆದರೇ ಇದರಲ್ಲಿ ಎರಡೆರಡು ಬಾಗಿಲು ಹೊಂದಿದ ಕೆಲವು ವ್ಯಾಪಾರಸ್ಥರು ಅಲ್ಲದೇ ಕೆಲವರು ತಮ್ಮ ಜನರನ್ನು ಹೊರಗೆ ನಿಲ್ಲಿಸಿ ಕದ್ದುಮುಚ್ಚಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿತು. ಇದು ಪ್ರಮಾಣಿಕವಾಗಿ ಬಂದ್ ಮಾಡುತ್ತಿದ್ದ ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ಅಲ್ಲದೇ ಕೇವಲ ಅಂಗಡಿ-ಮು0ಗಟ್ಟು ಮಾತ್ರ ಬಂದ್ ಮಾಡುತ್ತಿದ್ದಾರೇ ಆದರೇ ಜನ ಸಂಚಾರ ಹಾಗೂ ವಾಹನ ಸಂಚಾರ ಇರುವುದರಿಂದ ಸ್ವಯಂಪ್ರೇರಿತ ಬಂದ್ ಯಾವ ಉಪಯೋಗಕ್ಕೆ ಬರುತ್ತದೆ ಎಂಬ ಪ್ರಶ್ನೇಗಳು ಕೆಲವರಿಂದ ಕೇಳಿ ಬರುತ್ತಿವೆ.
ಸದ್ಯ ಮಾರ್ಚ ತಿಂಗಳಿನ ೨೪ರಿಂದ ೨ ತಿಂಗಳವರೆಗೆ ಸಂಪೂರ್ಣ ಲಾಕ್ಡೌನ್ ಆಗಿದ್ದರಿಂದ ಆ ಸಂದರ್ಭದಲ್ಲಿ ಸಾಕಷ್ಟು ಹಾನಿ ಅನುಭವಿಸಿರುವ ಸಣ್ಣ ವ್ಯಾಪಾರಸ್ಥರು ಈಗಲೂ ಮತ್ತೇ ಹಾನಿ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಕೆಲವರು ಮಾಧ್ಯಮಗಳ ಮುಂದೆ ತಮ್ಮ ಅನಿಸಿಕೆಯ ಜೊತೆಗೆ ಅಸಮಾಧಾನ ವ್ಯಕ್ತಪಡಿಸಿದ್ದು ದೊಡ್ಡ ವ್ಯಾಪಾರಸ್ಥರಿಗೆ, ಬಂಡವಾಳ ಶಾಹಿಗಳಿಗೆ ಸಂಪೂರ್ಣ ಲಾಕ್ಡೌನ್ ಮಾಡಿದರು ಸಮಸ್ಯೆ ಇಲ್ಲ. ಆದರೇ ಸ್ವಯಂಪ್ರೇರಿತ ಲಾಕ್ಡೌನ್ ಎಂದು ಕೆಲವರು ಮುಂದೆ ಬಾಗಿಲು ಹಾಕಿ ಹಿಂದಿನಿAದ ವ್ಯಾಪಾರ ಮಾಡುತ್ತಿದ್ದಾರೆ ಇಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರು ಮಾತ್ರ ಸದಾಕಾಲ ಹಾನಿ ಅನುಭವಿಸುವಂತಾಗಿದ್ದು ಸಂಕಷ್ಟದ ಜೀವನ ಸಾಗಿಸಬೇಕಾಗಿದೆ, ಸಣ್ಣ ಅಂಗಡಿಗಳೇ ಎಲ್ಲರ ಕಣ್ಣಿಗೆ ಬಿಳುತ್ತವೇ ಎಂದು ಬೇಸರದಿಂದ ಹೇಳಿಕೊಂಡರು.
ಕೆಲವರದ್ದು ಮಧ್ಯಾಹ್ನ ೪ ಗಂಟೆಯ ನಂತರ ವ್ಯಾಪಾರ ವಹಿವಾಟುಗಳು ಆರಂಭವಾಗುತ್ತವೇ ಆದರೇ ೩ ಗಂಟೆಗೆ ಬಂದ್ ಆದರೇ ತಮ್ಮ ಜೀವನ ಹೇಗೆ ? ಎಂಬುದು ಅವರ ಪ್ರಶ್ನೇಯಾಗಿದೆ.
ಸಣ್ಣಪುಟ್ಟ ಅಂಗಡಿಗಳು, ವ್ಯಾಪಾರಸ್ಥರು ಸೇರಿದಂತೆ ಇತರ ಕೆಲವು ವ್ಯಾಪಾರಸ್ಥರ ಅಳಲು ಏನೆಂದರೇ ಕೊರೊನಾ ಮಹಾಮಾರಿ ಇದ್ದರು ಕೂಡ ತಮ್ಮ ಅಂಗಡಿಗಳ ಭಾಡಿಗೆಯಲ್ಲಿ ಇಳಿಕೆಯಾಗಿಲ್ಲ, ಮಾನವೀಯತೆ ದೃಷ್ಠಿಯಿಂದಲೂ ಭಾಡಿಗೆಯಲ್ಲಿ ವಿನಾಯತಿಯ ಜೊತೆಗೆ ಕಾಲಾವಕಾಶವು ನೀಡಲಾಗಿಲ್ಲ ಹೀಗಿರುವಾಗ ಮತ್ತೇ ವ್ಯಾಪಾರ-ವಹಿವಾಟು ಇಲ್ಲದೇ ಭಾಡಿಗೆಯನ್ನು ತುಂಬುತ್ತ, ಕುಟುಂಬ ನಿರ್ವಹಣೆ, ಸಾಲ ಮರುಪಾವತಿ ಇನ್ನಿತರ ಜೀವನ ಹೇಗೆ ನಡೆಸುವುದು ಎಂಬುದು ಹಲವರ ಪ್ರಶ್ನೇಯಾಗಿದೆ.

ಈ ಬಗ್ಗೆ ಕೆಲವು ಸಂಘಟನೆಯವರು ಮತ್ತು ವ್ಯಾಪಾರಸ್ಥರು ಸೋಮವಾರದಿಂದ ಸರ್ಕಾರದ ಆದೇಶದಂತೆ ಸಾಯಂಕಾಲ ೮ ಗಂಟೆಯವರೆಗೆ ವಹಿವಾಟು ನಡೆಸಿ ೮ ಗಂಟೆಗೆ ಬಂದ್ ಮಾಡುತ್ತೇವೆ ಸರ್ಕಾರದ ಆಜ್ಞೆ ಪಾಲಿಸುತ್ತೇವೆ ಎಂದು ಹೇಳಿದ್ದಾರೆ ಅಲ್ಲದೇ ಈ ಬಗ್ಗೆ ತಾಲೂಕಾಡಳಿತದ ಗಮನಕ್ಕೂ ತರುವುದಾಗಿ ಮಾಹಿತಿ ನೀಡಿದ್ದಾರೆ.
Leave a Comment