ದಾಂಡೇಲಿ : ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ನಗರದಲ್ಲಿ ಮಂಗಳವಾರ ಒಂದೆ ದಿನ ೨೨ ಜನರಲ್ಲಿ ಸೋಂಕು ದೃಢವಾಗಿದ್ದು ನಗರದ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಒಂದೇ ಕುಟುಂಬದ ೧೨ ಜನರಿಗೆ ಸೋಂಕು ಪತ್ತೆಯಾಗಿದ್ದು ಮಂಗಳವಾರ ದಾಂಡೇಲಿಗೆ ಕರಾಳ ದಿನವಾಗಿ ಪರಿಣಮಿಸಿದೆ.
ಈವರೇಗೆ ಒಟ್ಟು ೫೪ ಪ್ರಕರಣಗಳು ದಾಖಲಾಗಿದ್ದು, ಇವುಗಳ ಪೈಕಿ ೧೧ ಸೋಂಕಿತರು ಗುಣಮುಖರಾಗಿದ್ದಾರೆ. ಸೋಮವಾರ ರಾತ್ರಿ ಮೃತಳಾಗಿದ್ದ ೪೬ ವರ್ಷದ ಮಹಿಳೆಯ ಗಂಟಲು ದ್ರವ ಪರೀಕ್ಷೆಯಲ್ಲಿ ಆಕೆಗೆ ಕೊರೊನಾ ಸೋಂಕಿರುವುದು ದೃಢವಾಗಿದೆ.

ಈಗಾಗಲೆ ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ರಾಜೇಶಪ್ರಸಾದ ಅವರು ಸೋಂಕಿತರ ಕುರಿತಂತೆ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸೋಂಕಿತರ ಪ್ರದೇಶ ಕಂಟೈನ್ಮೆoಟ್ ಪ್ರದೇಶವಾಗಿ ಮಾರ್ಪಡು:
ನಗರದ ಟೌನ್ಶೀಪ್ ರಾಘವೇಂದ್ರ ಮಠದ ಬಳಿ ಒಂದೆ ಕುಟುಂಬದ ೧೨ ಜನರಿಗೆ ಕೊರೊನೊ ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಆ ಪ್ರದೇಶವನ್ನು ಕಂಟೈನ್ಮೆoಟ್ ವಲಯವನ್ನಾಗಿಸಲಾಗಿ, ಆ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆಗೆ ನಗರ ಸಭೆಯ ವತಿಯಿಂದ ಬ್ಯಾರಿಕೇಡ್ ಹಾಗೂ ಬಿದಿರನ್ನು ಕಟ್ಟಿ ರಸ್ತೆ ಬಂದ್ ಮಾಡಲಾಗಿದೆ.
ದಿನವೊಂದಕ್ಕೆ ಸಿಂಗಲ್ ಡಿಜಿಟಿನಿಂದ ಡಬಲ್ ಡಿಜಿಟಿನಲ್ಲಿ ಪತ್ತೆಯಾಗುತ್ತಿರುವ ಈ ಸೋಂಕು ಮತ್ತಷ್ಟು ಜನರನ್ನು ಆವರಿಸಲಿದೆ ಎಂಬ ಮಾತು ಕೇಳಿಬರುತ್ತಿದೆ. ಮಂಗಳವಾರದ ಸ್ಥಿತಿ ನೋಡಿದರೇ ಅರ್ಧ ಶತಕದಿಂದ ಶತಕವನ್ನು ದಾಟಿ ಹೋಗಲು ಹೆಚ್ಚು ಹೊತ್ತು ಬೇಡ ಎಂಬ ಮಾಹಿತಿ ಲಭ್ಯವಾಗುತ್ತಿದೆ.


Leave a Comment