ಹಳಿಯಾಳ:- ಕೊವಿಡ್-೧೯ ಸೊಂಕು ಪತ್ತೆ ಪರೀಕ್ಷೆಗಾಗಿ ರಕ್ತದ ಮಾದರಿ, ಗಂಟಲು ದ್ರವ ನೀಡಲು ಬರುವವರಿಗೆ ಆತ್ಮಸ್ಥೆರ್ಯ ತುಂಬುವ ಜೊತೆಗೆ ಅವರಿಗೆ ಕೊರೊನಾ ಕುರಿತು ಇರುವ ಗಾಢವಾದ ಭಯವನ್ನು ದೂರ ಮಾಡಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಅವರಲ್ಲಿ ಮನವಿ ಮಾಡಿದರು.
ಕೊವಿಡ್ ಪರೀಕ್ಷೆಗಾಗಿ ಬರುವವರಿಗೆ ಸಮಸ್ಯೆಯಾಗುತ್ತಿದೆ, ಕ್ವಾರಂಟೈನ್ಗೆ ಒಳಪಟ್ಟವರಿಗೂ ಕೆಲವೊಂದು ಸಮಸ್ಯೆಯಾಗುತ್ತಿರುವ ಬಗ್ಗೆ ಅವರಿಗೆ ಬಂದ ದೂರಿನ ಮೆರೆಗೆ ನೇರವಾಗಿ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ತಾಲೂಕಾ ವೈದ್ಯಾಧಿಕಾರಿಯೊಂದಿಗೆ ಚರ್ಚಿಸಿದರು.

ಕೊವಿಡ್-೧೯ ಉಲ್ಬಣಗೊಳ್ಳುತ್ತಿರುವ ಈ ದಿನಗಳಲ್ಲಿ ಜನರು ಸಾಕಷ್ಟು ಭಯಭೀತರಾಗಿದ್ದಾರೆ. ಅವರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ, ಗ್ರಾಮಾಂತರ ಭಾಗದ ಜನರಲ್ಲಂತೂ ಕೊವಿಡ್ ಬಂದರೇ ಸತ್ತೇ ಹೊಗುತ್ತಾರೆ ಎಂಬ ಭಾವನೆ ಮನದಲ್ಲಿ ಗಟ್ಟಿಯಾಗಿ ಬೇರುರಿರುವುದು ಕಂಡು ಬರುತ್ತಿರುವ ಕಾರಣ ಆರೋಗ್ಯ ಇಲಾಖೆಯಿಂದ ಜನರಲ್ಲಿ ಕೊವಿಡ್ ಕುರಿತು ಇರುವ ಅನಾವಶ್ಯಕ ಭಯದ ವಾತಾವರಣವನ್ನು ದೂರ ಮಾಡಬೇಕು. ಕೊವಿಡ್ ನಿಂದ ರಕ್ಷಣೆ ಪಡೆಯಲು ಸಾಧ್ಯವಿದೆ. ಸರ್ಕಾರದ ನಿರ್ದೇಶನಗಳನ್ನು ಪಾಲಿಸುವಂತೆ ಮನವೊಲಿಸಬೇಕು. ಮೇಲಾಗಿ ಜಾಗೃತಿ ಮೂಡಿಸುವ ಕರ್ಯ ವೈದ್ಯರೇ ಮಾಡಬೇಕು ಎಂದು ಮನವಿ ಮಾಡಿದರು.

ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್-೧೯ ಸೊಂಕು ಪತ್ತೆ ಪರೀಕ್ಷೆಗಾಗಿ ಕ್ವಾರಂಟೈನ್ಗೆ ಒಳಪಟ್ಟವರು ಇತರರು ಸಾಲಿನಲ್ಲಿ ನಿಂತು ತೊಂದರೆ ಅನುಭವಿಸುತ್ತಿದ್ದು ಅವರಿಗೆ ಹಲವು ವಿಷಯಗಳಲ್ಲಿ ಸಮಸ್ಯೆಯಾಗುತ್ತಿರುವ ಕುರಿತು ದೂರುಗಳು ಬರುತ್ತಿವೆ ಕಾರಣ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಅವರಿಗೆ ಮಾಜಿ ಶಾಸಕರು ತಿಳಿಸಿದರು.
ಆಸ್ಪತ್ರೆಯಲ್ಲಿ ಸಮಸ್ಯೆಗಳು ಏನಾದರೂ ಇದ್ದರೇ ಗಮನಕ್ಕೆ ತಂದರೇ ವೈಯಕ್ತಿಕವಾಗಿ ಸಾಧ್ಯವಾಗದಿದ್ದರೇ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರೊಂದಿಗೆ ಮಾತನಾಡಿ ಸಮಸ್ಯೆ ಸರಿಪಡಿಸುವ ಕೆಲಸವನ್ನು ಮಾಡುವ ಭವರವಸೆಯನ್ನು ಸುನೀಲ್ ಹೆಗಡೆ ನೀಡಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಬಿಜೆಪಿ ಜಿಲ್ಲಾ ಮುಖಂಡ ಶಿವಾಜಿ ನರಸಾನಿ, ಪುರಸಭೆ ಸದಸ್ಯ ಉದಯ ಹೂಲಿ, ಬಿಜೆಪಿ ತಾಲೂಕಾ ಉಪಾಧ್ಯಕ್ಷ ವಾಸು ಪೂಜಾರಿ, ಪ್ರಧಾನ ಕರ್ಯದರ್ಶಿ ಅನಿಲ ಮುತ್ನಾಳೆ, ನಗರ ಘಟಕದ ಅಧ್ಯಕ್ಷರಾದ ತಾನಾಜಿ ಪಟ್ಟೇಕರ, ಸಿದ್ದು ಶೆಟ್ಟಿ, ಪ್ರಮುಖರಾದ ವಿಲಾಸ ಯಡವಿ ಇತರರು ಇದ್ದರು.
Leave a Comment