
ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು ಸಾಕಷ್ಟು ಮಂದಿ ಉತ್ತಮ ಅಂಕ ಗಳಿಸಿ ಸಡಗರ ಸಂಭ್ರಮದಲ್ಲಿದ್ದಾರೆ. ಆದರೆ, ಮನಕಲಕುವ_ಘಟನೆಯೊಂದರಲ್ಲಿ_ಪಿಯು_ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು_ಉತ್ತಮ ಅಂಕಗಳಿಸಿದ್ದರೂ #ಇಂದು_ಸಂಭ್ರಮಿಸಲು
ಅವಳೇ ಇಲ್ಲ.
ಹೌದು, ದಾವಣಗೆರೆಯ ಅನುಷಾ_ರಕ್ತ ಕ್ಯಾನ್ಸ್ರ್ನಿಂದ_ಬಳಲಿ_ಚಿಕಿತ್ಸೆ_ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ವೈದ್ಯಳಾಗುವ ಕನಸು ಕಟ್ಟಿಕೊಂಡಿದ್ದ ಅನುಷಾ ಹಗಲು ರಾತ್ರಿ ಕಷ್ಟಪಟ್ಟು ಓದಿ ಒಳ್ಳೆಯ ನಿರೀಕ್ಷೆಯೊಂದಿಗೆ ಪಿಯು ಪರೀಕ್ಷೆ ಎದುರಿಸಿದ್ದಳು. ಆದರೆ, ವಿಧಿಯಾಟ ಏನಿತ್ತೋ 5 ಪರೀಕ್ಷೆಗೆ ಹಾಜರಾಗಿದ್ದ ಅನುಷಾ ಕೊನೆಯ ಪರೀಕ್ಷೆ ಬರೆಯುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದಳು.
ಬ್ಲಡ್ ಕ್ಯಾನ್ಸರ್ ಎಂಬ ಮಹಾಮಾರಿ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಜೀವಕ್ಕೆ ಕುತ್ತಾಯ್ತು. ತಮ್ಮ ಮಗಳ ಬಗ್ಗೆ ಬಸವರಾಜಪ್ಪ ಹಾಗೂ ಮಂಜಮ್ಮ ದಂಪತಿ ಭಾರಿ ಕನಸು ಕಂಡಿದ್ದರು. ಮಗಳ ಆಸೆಗೆ ಒತ್ತಾಸೆಯಾಗಿ ನಿಂತಿದ್ದರು. ಆದರೆ ಅವರು ಕನಸು ಇಂದು ಕನಸಾಗೇ ಉಳಿದಿದೆ.
ಗಣಿತದಲ್ಲಿ ನೂರಕ್ಕೆ ನೂರು ಅಂಕ
ಸಿದ್ದಗಂಗಾ_ಪದವಿಪೂರ್ವ_ಕಾಲೇಜಿನ ಸೈನ್ಸ್ ವಿದ್ಯಾರ್ಥಿನಿಯಾಗಿದ್ದ ಅನುಷಾ ತಾನು ಎದುರಿಸಿದ ಐದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾಳೆ. ಗಣಿತದಲ್ಲಿ_100ಕ್ಕೆ_100 ಅಂಕ ಗಳಿಸಿರುವ ಅನುಷಾ, ಕನ್ನಡ_92, ಫಿಸಿಕ್ಸ್_91, ಕೆಮಿಸ್ಟ್ರಿ_89 ಹಾಗೂ ಬಯೋಲಾಜಿ_95 ಅಂಕ ಗಳಿಸಿದ್ದಾಳೆ. ಬದುಕಿದ್ದರೆ, ಉಳಿದ ಇನ್ನೊಂದು ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸುತ್ತಿದ್ದಳು ಎಂಬ ಭರವಸೆ ಇತ್ತು. ಇಂದು ಸಂಭ್ರಮ ಪಡಬೇಕಾಗಿದ್ದ ಜೀವ ಇಲ್ಲದೇ ಪಾಲಕರ ಆಶಾಗೋಪುರ ಕಳಚಿ ಬಿದ್ದಂತಾಗಿದೆ.
ಕೃಪೆ -(ದಿಗ್ವಿಜಯ ನ್ಯೂಸ್
Leave a Comment