ಹಳಿಯಾಳ;- ಹಳಿಯಾಳಕ್ಕೆ ಶನಿವಾರ ಕರಾಳ ದಿನವಾಗಿ ಪರಿಣಮಿಸಿದೆ ಒಂದೇ ದಿನ ದಾಖಲೆಯ 20 ಸೊಂಕಿತರು ಪತ್ತೆಯಾಗುವ ಮೂಲಕ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.
ಬೆಳಿಗ್ಗಿನ ಬುಲೆಟಿನ್ ನಲ್ಲಿ 12 ಸೊಂಕಿತರು ಪತ್ತೆಯಾಗಿದ್ದರು ಅದೇ ಸಾಯಂಕಾಲದ ಬುಲೆಟಿನ್ನಲ್ಲಿ ಮತ್ತೇ 8ಜನರಲ್ಲಿ ಸೊಂಕು ಪತ್ತೆಯಾಗುವ ಮೂಲಕ ಒಂದೇ ದಿನ ದಾಖಲೆಯ 20 ಜನರಲ್ಲಿ ಸೊಂಕು ಪತ್ತೆಯಾಗಿ ತಾಲೂಕಿನ ಜನರನ್ನು ಆತಂಕಕ್ಕೆ ದೂಡಿದೆ. ಗ್ರಾಮಾಂತರ ಭಾಗದಲ್ಲಿ 16 ಹಾಗೂ ಪಟ್ಟಣ ಪ್ರದೇಶದಲ್ಲಿ 4 ಹೀಗೆ ಒಟ್ಟೂ20 ಪ್ರಕರಣಗಳು ಶನಿವಾರ ದಾಖಲಾಗಿವೆ.
ಸಾಯಂಕಾಲ ಪತ್ತೆಯಾದ ಸೊಂಕಿತರ ವಿವರ
ಹಳಿಯಾಳ ಪಟ್ಟಣದ ದೇಶಪಾಂಡೆ ನಗರದ ೬೦ ವರ್ಷದ ಸೊಂಕಿತನ ಸಂಪರ್ಕಕ್ಕೆ ಬಂದಿದ್ದ ಆತನ ಮಗ ಮತ್ತು ಸೊಸೆಯಲ್ಲಿ ಸೊಂಕು ದೃಢಪಟ್ಟಿದೆ. ತಾಲೂಕಿನ ಮುಂಡವಾಡ ಗ್ರಾಮದ ಇಬ್ಬರು ಮಹಿಳೆಯರಲ್ಲಿ ಹಾಗೂ ತತ್ವಣಗಿ ಗ್ರಾಮದ ಮೂವರು ಪುರುಷರಲ್ಲಿ ಹಾಗೂ ಓರ್ವ ಮಹಿಳೆಯಲ್ಲಿ ಸೊಂಕು ದೃಢಪಟ್ಟಿರುವ ಬಗ್ಗೆ ಜಿಲ್ಲಾ ಹೆಲ್ತ್ ಬುಲೆಟಿನ್ ದೃಢಪಡಿಸಿದೆ.

news and ads :- yogaraj sk – 9740107577
Leave a Comment