
ಉತ್ತರ_ಕನ್ನಡ (ಕಾರವಾರ): ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಭಟ್ಕಳ ಮತ್ತು ಶಿರಸಿ_ತಾಲೂಕಿನ_ಇಬ್ಬರು_ವಯೋವೃದ್ದರು ಚಿಕಿತ್ಸೆ_ಫಲಕಾರಿಯಾಗದೆ_ಮೃತಪಟ್ಟಿರುವ ಘಟನೆ ಕಾರವಾರ_ಮೆಡಿಕಲ್ ಕಾಲೇಜಿನ ಕೋವಿಡ್-19 ವಾರ್ಡ್ ನಲ್ಲಿ ನಡೆದಿದೆ.
ಶಿರಸಿ_ತಾಲೂಕಿನ_ದಾಸನಕೊಪ್ಪ ಮೂಲದ 76 ವರ್ಷದ ವೃದ್ಧ ನ್ಯುಮೋನಿಯಾದಿಂದ ಬಳಲುತ್ತಿದ್ದು, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯಿಂದ ಕ್ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಭಟ್ಕಳದ ವೃದ್ಧೆಯೂ ಸಹ ನ್ಯೂಮೋನಿಯಾ, ಮಧುಮೇಹದಿಂದ ಬಳಲುತ್ತಿದ್ದು, ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದ್ದು, ಮೃತಪಟ್ಟಿದ್ದಾರೆ.

Leave a Comment