ಹಳಿಯಾಳ :- ಸೋಮವಾರ ಹಳಿಯಾಳದ 74 ವರ್ಷದ ವೃದ್ದನೋರ್ವ_ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತ ವ್ಯಕ್ತಿಯ ಗಂಟಲು ದ್ರವ ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಿದ್ದು ವೃದ್ದನಿಗೆ ಕೊರೊನಾ_ಸೊಂಕು_ದೃಢಪಟ್ಟಿದೆ. ಈ ಮೂಲಕ ಹಳಿಯಾಳದಲ್ಲಿ ಕೊವಿಡ್ ನಿಂದ ಸಿದ್ದಗಂಗಾ_ಪದವಿಪೂರ್ವ_ಕಾಲೇಜಿನಮೃತಪಟ್ಟ ಮೊದಲ_ಪ್ರಕರಣ ಇದಾಗಿದೆ.
ಹಳಿಯಾಳ ಪಟ್ಟಣದ ಜವಾಹರಗಲ್ಲಿ(ಗೌರಿಗುಡಿ ರಸ್ತೆಯ) ನಿವಾಸಿ 74 ವರ್ಷದ ವಯೋವೃದ್ದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಇನಿಗೆ ಜ್ವರ ಕಾಣಿಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ.
ಸೋಮವಾರ ಇತ ಮೃತಪಟ್ಟಿದ್ದು ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣಾನಂತರ ವೃದ್ದನ ಗಂಟಲು ದ್ರವ ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಿದ್ದು ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಸದ್ಯ ಈ ವಿಷಯ ತಾಲೂಕಿನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.
ಗೌರಿಗುಡಿ ರಸ್ತೆ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಮೃತನ ಅಂತ್ಯಕ್ರಿಯೆಯನ್ನು ಹಳಿಯಾಳದ ಚವ್ವಾಣ ಪ್ಲಾಟ್ ಸಮೀಪದ ಸ್ಮಶಾನದಲ್ಲಿ ನೆರವೆರಿಸಲು ತೆರಳಿದಾಗ ಅಲ್ಲಿಯ ಅಕ್ಕ ಪಕ್ಕದ ಸಾರ್ವಜನಿಕರು ಅಂತ್ಯಕ್ರಿಯೇ ಇಲ್ಲಿ ನೆರವೆರಿಸಬೇಡಿ ಎಂದು ತಕರಾರು ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರು ಅಂತ್ಯಕ್ರಿಯೆಗೆ ಅಡ್ಡಿಪಡಿಸುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದಾಗ ಜನತೆ ಹಿಂದೆ ಸರಿದ ವಿದ್ಯಮಾನ ನಡೆಯಿತು.
ಶವವನ್ನು ಹಿಂದೂ ಪದ್ದತಿಯಂತೆ ದಹನ ಮಾಡುವ ಮೂಲಕ ಅಂತ್ಯಕ್ರಿಯೇ ನೆರವೆರಿಸಲಾಯಿತು.

Leave a Comment