ಹಳಿಯಾಳ:- ಕಳೆದ ೫ ದಿನಗಳ ಹಿಂದೆಯಷ್ಟೇ ಸೊಂಕಿತನಾಗಿದ್ದ ಗುತ್ತಿಗೇರಿಗಲ್ಲಿಯ ಯುವಕನೊಂದಿಗೆ ಇರುತ್ತಿದ್ದ, ಆನೊಂದಿಗೆ ಕೇರಮ್ ಆಡಿದ್ದ ಆತನ ಗೆಳೆಯನಿಗೂ ಸೊಂಕು ತಗುಲಿರುವ ಬಗ್ಗೆ ಬುಧವಾರದ ಹೆಲ್ತ್ ಬುಲೆಟಿನ್ ದೃಢಪಡಿಸಿದೆ.
ಕೊರೊನಾ ಮಹಾಮಾರಿ ಹಳಿಯಾಳಕ್ಕೆ ಬುಧವಾರ ಕೊಂಚ ರಿಲಿಫ್ ನೀಡಿದ್ದು ಪಟ್ಟಣದ ಗುತ್ತಿಗೇರಿಗಲ್ಲಿಯಲ್ಲಿ ಕೇವಲ ಒಂದೇ ಒಂದು ಪ್ರಕರಣ ದೃಢಪಟ್ಟಿದೆ. ಪಟ್ಟಣದ ಗುತ್ತಿಗೇರಿಗಲ್ಲಿಯ ಸೊಂಕಿತನೊAದಿಗೆ ಕ್ಯಾರೆಮ್ ಆಡಿದ್ದ ಆತನ ಗೆಳೆಯ 25 ವರ್ಷದ ಯುವಕನಿಗೂ ಬುಧವಾರ ಕೊರೊನಾ ಸೊಂಕು ಒಕ್ಕರಿಸಿರುವುದು ದೃಢಪಟ್ಟಿದೆ. ಇತನ ಮನೆ ಸೊಂಕಿತ ಮನೆಯ ಸನಿಹದಲ್ಲೇ ಇದ್ದು ಇಂದಿನಿAದ ಮತ್ತೇ 14 ದಿನ ಈ ಪ್ರದೇಶ ಸೀಲ್ಡೌನ್ ಆಗಿರಲಿದೆ. ಸೊಂಕಿತನನ್ನು ತಾಲೂಕಿನ ಬಾಣಸಗೇರಿಯ ಕೊವಿಡ್-ಕೇರ್ ಸೆಂಟರಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ತಹಶೀಲ್ದಾರ್ ಕಚೇರಿಯ ಮಾಹಿತಿಯಂತೆ ಹಳಿಯಾಳದಲ್ಲಿ ಸೊಂಕಿತರ ಸಂಖ್ಯೆ 94ಕ್ಕೆ ಏರಿಕೆಯಾಗಿದ್ದು ಈವರೆಗೆ20 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ತಾಲೂಕಿನಲ್ಲಿ ಒಟ್ಟೂ 74 ಸಕ್ರಿಯ ಕೊರೊನಾ ಸೊಂಕಿತರು ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಂಕಿತರು ಪತ್ತೆಯಾಗಿರುವ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಒಟ್ಟೂ 55 ಕಂಟೇನಮೆAಟ್ ಝೋನ್ಗಳಿವೆ. ಅಲ್ಲದೇ ೫೦೦ಕ್ಕೂ ಅಧಿಕ ಜನ ಹೋಮ್ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ.
Leave a Comment